ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday, 27 April 2009

ನಮ್ಮ-ನಿಮ್ಮೊಳಗೆ-೦೮

ಬಾಣಂತಿ ಕೋಣೆಯ ಸುತ್ತ ಮುತ್ತ... ಗೂಢ-ಗಾಢ-ಮೂಢ ನಂಬಿಕೆಗಳು


ಹೊಸ ಮಗು ಮತ್ತು ಬಾಣಂತನ ನಮ್ಮಲ್ಲಿನ್ನೂ ಆತಂಕ ಕಾತರ ಹುಟ್ಟಿಸುವ ಸಂದರ್ಭಗಳೇ ಹೆಚ್ಚು. ಇಂತಹ ಬಾಣಂತನದ ಸುತ್ತಮುತ್ತ ಇರುವ ಕೆಲವಾರು ನಂಬಿಕೆಗಳನ್ನು ದಾಖಲಿಸುವ ಪ್ರಯತ್ನ ಇದು. ನಿಮಗೆ ತಿಳಿದಿರುವ ಇನ್ನಷ್ಟು ಆಚರಣೆಗಳನ್ನು ಇಲ್ಲಿ ಸೇರಿಸಿದರೆ ಸಂತೋಷ.

(೦೧) ಮಗುವನ್ನು ಬೆಳಗಿನ ಎಳೆ ಬಿಸಿಲಿಗೆ ಹಿಡಿದರೆ ಮಗುವಿಗೆ ಒಳ್ಳೇ ಬಣ್ಣ ಬರುತ್ತದೆ (ಪಿ.ಎಸ್.ಪಿ.ಯ ಖಜಾನೆಯಿಂದ).
(೦೨) ಬಾಣಂತಿ ನೀರನ್ನೇ ಕುಡಿಯಬಾರದು (ಥಂಡಿಯಾಗುತ್ತದೆ ಅನ್ನುವುದು ಕಾರಣ).
(೦೩) ಬಾಣಂತಿಯ ಹಾಸಿಗೆಯ ಬದಿಯಲ್ಲಿ/ ದಿಂಬಿನ ಅಡಿಯಲ್ಲಿ ಪೊರಕೆ ಕಡ್ಡಿ ಇಟ್ಟರೆ ದುಷ್ಟಶಕ್ತಿಗಳಿಂದ ರಕ್ಷೆ.
(೦೪) ಮಗುವಿಗೆ ವಿಕಾರವಾಗಿ (ಚಂದವಾಗಿ ಉರುಟಾಗಿ ಅಲ್ಲ) ಕಾಡಿಗೆ ಬೊಟ್ಟು ಇಟ್ಟರೆ ಮಗುವಿಗೆ ದೃಷ್ಟಿ ಆಗುವುದಿಲ್ಲ.
(೦೫) ಮಗುವನ್ನು ತಾಯಿಯೇ ಒಂದೇ ಸಮನೆ ದಿಟ್ಟಿಸಿ ನೋಡಿದರೂ ಮಗುವಿಗೆ ದೃಷ್ಟಿಯಾಗುತ್ತದೆ (ಕಾಡಿಗೆ ಬೊಟ್ಟಿನ ವಿಕಾರ ಇಲ್ಲಿ ಕೆಲಸ ಮಾಡದು).
(೦೬) ಹಸಿ ಬಾಣಂತಿ (ತಿಂಗಳಾಗುವವರೆಗೆ) ನೆಲದಲ್ಲಿ ಕೂತುಕೊಳ್ಳುವಾಗ ಸುಖಾಸನದಲ್ಲಿ (ಚಕ್ಕಂಬಟ್ಲು ಹಾಕಿ) ಕೂರಬಾರದು.
(೦೭) ಬಾಣಂತಿ ಓದಬಾರದು, ಬರೆಯಬಾರದು, ಹೊಲಿಯಬಾರದು, ಯಾವುದೇ ಕಸೂತಿ ಕೆಲಸ ಮಾಡಬಾರದು (ಕಣ್ಣಿಗೆ ತೊಂದರೆಯಾಗುತ್ತದೆ ಅನ್ನುವುದು ಕೊಡುವ ಕಾರಣ).
(೦೮) ಹೆರಿಗೆಯಾಗಿ ಎರಡು ಮೂರು ವಾರಗಳ ವರೆಗೆ ಬಾಣಂತಿ ನಡೆದಾಡಲೇಬಾರದು (ಅವಶ್ಯಕ ಕೆಲಸಗಳಿಗೆ ಹೊರತಾಗಿ).
(೦೯) ಇದೇ ಸಮಯದಲ್ಲಿ ಮಗುವಿಗೆ ಹಾಲೂಡಿಸುವ ಸಮಯವಲ್ಲದೆ ಆಕೆ ಕೂತಿರಬಾರದು, ಮಲಗಿರಲೇಬೇಕು (ಬೆನ್ನು ನೋವು ಬರುತ್ತದೆ ಅನ್ನುವುದು ಕಾರಣ).
(೧೦) ಬಾಣಂತಿ ಕೋಣೆಯಲ್ಲಿ ಹೆಚ್ಚು ಬೆಳಕಿರಬಾರದು, ಅರೆಗತ್ತಲೆಯೇ ಇರಬೇಕು (ವಿಶ್ರಾಂತಿಗೆ ಅನುಕೂಲ ಅನ್ನುವುದು ಕಾರಣ).

Tuesday, 14 April 2009

ಶುಭ ಹಾರೈಕೆಗೆ ಪುಟ್ಟ ಕನ್ನಡಿ

Link

ಓದುಗರಿಗೆಲ್ಲ ಸೌರಮಾನ 'ವಿಷು' ಯುಗಾದಿಯ ಶುಭಾಶಯಗಳು.
'ವಿಷು-ಕಣಿ'ಯ ಚಿತ್ರದೊಂದಿಗೆ ನಿಮಗೆಲ್ಲ ಮತ್ತೊಂದು ಹೊಸವರುಷದಾಚರಣೆ ಸಂಪ್ರದಾಯದ ಕಿರುನೋಟ
ಒಂದೆರಡು ನಗೆಹನಿಗಳ ಜೊತೆಗೆ ಇಲ್ಲಿದೆ...