ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday 1 November, 2010

ಸಮ್ಮೋಹನ ಚಿಕಿತ್ಸೆ- ಎರಡನೇ ಹೆಜ್ಜೆ

ಸ್ನೇಹಿತರೆ,

ಮಣಿಪಾಲದಲ್ಲಿ ಇನ್ನರ್ ಲೈಟ್ ವೆಲ್‍ನೆಸ್ ಸೆಂಟರ್ ಆರಂಭವಾದ ಸುದ್ದಿ ತಿಳಿಸಿದಾಗ ಶುಭಾಶಯಗಳನ್ನು ಅಭಿನಂದನೆಗಳನ್ನು ಸಲ್ಲಿಸಿದ್ದೀರಿ. ಮತ್ತೊಮ್ಮೆ ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು.

ಇನ್ನರ್ ಲೈಟ್ ಮಂಗಳೂರಿಗೂ ಬೆರಳುಚಾಚಿದೆ. ಪ್ರತೀ ಶನಿವಾರ (ಹಬ್ಬದ ದಿನಗಳನ್ನು ಹೊರತಾಗಿ) ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ/ರಾತ್ರೆಯ ತನಕ ಮಂಗಳೂರು ನರ್ಸಿಂಗ್ ಹೋಂನಲ್ಲಿ ಇರುವ ವ್ಯವಸ್ಥೆಯಾಗಿದೆ. ಈ ವಿಷಯವನ್ನೂ ನಿಮ್ಮೊಡನೆ ಹಂಚಿಕೊಳ್ಳುವ ಸಂತಸ ನನ್ನದು.

ಈಗಾಗಲೇ ಮಣಿಪಾಲದಲ್ಲಿ ಕೆಲವು ಗ್ರಾಹಕರಿದ್ದಾರೆ. ಮಂಗಳೂರಿನ ಕೆಲವು ಗ್ರಾಹಕರು ಮಣಿಪಾಲದತನಕ ಬರುವ ಅನಾನುಕೂಲತೆಯನ್ನು ವ್ಯಕ್ತಪಡಿಸಿದರು. ಆದರೂ ಮೊದಲ ವಾರ ಅಲ್ಲಿಂದಲೂ ಬಂದು ಹೋದರು. ಅವರ ಅನಾನುಕೂಲತೆ ನನಗೂ ಅರ್ಥವಾಗುತ್ತದೆ. ಹೀಗಿರುವಾಗ ಬಂಧುಗಳೊಬ್ಬರ ಮೂಲಕ ಸ್ನೇಹಸೇತುವಿಗೆ ಹೊಸದೊಂದು ಕೊಂಡಿ ಸೇರಿ, ಅವರ ಮುಖೇನ ಮಂಗಳೂರು ನರ್ಸಿಂಗ್ ಹೋಂನಲ್ಲಿ ಒಂದು ಪರೀಕ್ಷಣಾ ಕೊಠಡಿ ನಮಗಾಗಿ ತೆರೆದಿರುವ ಒಪ್ಪಂದವಾಗಿದೆ.

ಮಂಗಳೂರಿಗರು ಓದಿಕೊಂಡಿರಾ?


ನೀವೂ ಬರುವಿರಾದರೆ ಭೇಟಿಯ ಸಮಯ ನಿಗದಿಗೊಳಿಸಲು ಸಂಪರ್ಕಿಸಿ:
88610 38936
innerlightmanipal@gmail.com