ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Thursday, 10 September 2009

ಪ್ರವಾಸ ಪುರವಣಿ

ಸರಿಯಾಗಿ ಹತ್ತು ದಿನ, ಸರಾಸರಿ ದಿನಕ್ಕೆ ಮುನ್ನೂರಿಪ್ಪತ್ತು ಮೈಲುಗಳಂತೆ ಡ್ರೈವ್ ಮಾಡಿಕೊಂಡು ಅಮೆರಿಕದ ಪಶ್ಚಿಮ ಬದಿಯಲ್ಲಿರುವ ನೆವಾಡ (Nevada), ಅರಿಝೋನಾ (Arizona), ಯೂಟಾ (Utah) ರಾಜ್ಯಗಳಲ್ಲಿ ಸುತ್ತಾಡಿ, ಅಲ್ಲಿನ ಕೆಲವೊಂದು ನ್ಯಾಷನಲ್ ಪಾರ್ಕ್ಸ್, ಮಾನ್ಯುಮೆಂಟ್ಸ್ ನೋಡಿಕೊಂಡು ಬಂದೆವು. ಒಂದೊಂದೇ ಸ್ಥಳದ ಕುರಿತಾಗಿ, "ಪ್ರವಾಸ ಪುರವಣಿ" ಅನ್ನುವ ಹೆಸರಲ್ಲಿ ಇಲ್ಲಿ ಬರೆಯುವ ಹುನ್ನಾರವಿದೆ, ಕೆಲವೊಂದು ಫೋಟೋಗಳ ಸಹಿತ.

ಬೇರೊಂದು ಬರವಣಿಗೆಯಲ್ಲೂ ತೊಡಗಿಕೊಂಡಿರುವುದರಿಂದ ಒಂದಿಷ್ಟು ತಡವಾಗಬಹುದು. ನಿಯಮಿತವಾಗಿ ಬರಹಗಳು ಬಾರದಿರಬಹುದು. ಓದುಗರು ಮುನಿಸಿಕೊಳ್ಳದೆ ಮನ್ನಿಸುವಿರೆಂದು ಆಶಿಸುತ್ತೇನೆ.

ನಿಮ್ಮ ಕುತೂಹಲ ಮತ್ತು ಔದಾರ್ಯವನ್ನು ಕಾದಿರಿಸಿಕೊಳ್ಳುತ್ತಾ....

10 comments:

Anonymous said...

ಜ್ಯೋತಿ ಅಕ್ಕಾ,
"ಪ್ರವಾಸ ಪುರವಣಿ" ಬರುತ್ತಿರುವುದು ತಿಳಿದು ಖುಷಿಯಾಯ್ತು. ಹೆಚ್ಚು ಕುತೂಹಲದಿಂದ
ಕಾಯುತ್ತಿದ್ದೇನೆ(ವೆ):-).
ಭಾರ್ಗವಿ.

ತೇಜಸ್ವಿನಿ ಹೆಗಡೆ said...

ಅಕ್ಕಾ,

ಹೊಸ ಪ್ರದೇಶಗಳು, ಅದರೊಳಗಿನ ವೈಚಿತ್ರ್ಯಗಳನ್ನು ಸಚಿತ್ರವಾಗಿ ತಿಳಿದುಕೊಳ್ಳಲು ಕಾಯುತ್ತಿರುವೆ. ಬೇಗ ಬರೆಯಿರಿ..;)

shivu.k said...

ಜ್ಯೋತಿ ಮೇಡಮ್,

ಪ್ರವಾಸ ಪುರವಾಣಿ ಓದಲು ಚಿತ್ರಗಳನ್ನು ನಾನಂತೂ ಕಾಯುತ್ತಿದ್ದೇನೆ...ಬೇಗ ಹಾಕಿ..

ಸುಪ್ತದೀಪ್ತಿ suptadeepti said...

ಭಾರ್ಗವಿ, ತೇಜು, ಶಿವು, ನಿಮ್ಮ ಪ್ರೀತಿಯ ಒತ್ತಾಸೆಗೆ ವಂದನೆಗಳು. ಸದ್ಯದಲ್ಲೇ ಬರೆಯುತ್ತೇನೆ.

ಶ್ರೀವತ್ಸ ಜೋಶಿ said...

"ನಾವ್ ಬಂದೇವಾ ನಾವು ಬಂದೇವಾ ನಾವ್ ಬಂದೇವ ಶ್ರೀಶೈಲ ನೋಡೊದಕ್ಕ ಸ್ವಾಮಿಸೇವಾ ಮಾಡಿಮತ್ತೆ ಹೋಗೋದಕ್ಕ... "
ಇದ್ದಂತೆಯೇ
"NAU ಸುತ್ತಾಡಿ ಬಂದೇವಾ... ಈಗಿನ್ನು ಚಿತ್ರಸಮೇತ ಬ್ಲಾಗ್ ಬರೀತೇವ..." ಎಂಬ ಹಾಡು ಸರಿಹೋಗುತ್ತದೆ.

[NAU = Nevada, Arizona, Utah.
:-)]

ಸುಪ್ತದೀಪ್ತಿ suptadeepti said...

ವತ್ಸ, ನಿಮ್ಮ ಪನ್-ಯೋಚನೆಗೆ ಸರಿಯಾಗಿಯೇ NAU ಪಯಣಕೆ ಸ್ವಾಗತ.

sritri said...

ಪ್ರವಾಸ ಪುರವಣಿಗೆ ಕಾಯುವವರ ಲಿಸ್ಟಿನಲ್ಲಿ ನಾನೂ ಫಸ್ಟ್ ನಿಂತಿದೀನಿ.

ಸುಪ್ತದೀಪ್ತಿ suptadeepti said...

ವೇಣಿ, ಎಲ್ಲರೂ ಹೊರಟು ಗಾಡಿ ಹತ್ತಿರುವಾಗ ನೀನು ಹೊಸ್ತಿಲಲ್ಲೇ ನಿಂತು "ನಾನು ಫಸ್ಟ್" ಅಂತೀಯಲ್ಲ! ಇದೇನೇ?

Jagali bhaagavata said...

Video ilva? baree sullu ashwaasane kottiddaa?

ಸುಪ್ತದೀಪ್ತಿ suptadeepti said...

ಓಹೋಹೋ... ಭಾಗವತರು! ಬರಬೇಕು, ಬರಬೇಕು.ಎಲ್ಲಿಂದ ಬಂದಿರಿ? ಎತ್ತಕಡೆ ಹೊರಟವರು? ದಾರಿ ತಪ್ಪಿತೆ? ಪರವಾಗಿಲ್ಲ, ಹೀಗಾದರೂ ನಮ್ಮ ನೆನಪಾಯ್ತಲ್ಲ! ಸಂತೋಷ.