ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday, 27 June 2011

ವಂದನೆಗಳು... ಧನ್ಯವಾದಗಳು





5 comments:

V.R.BHAT said...

ಜ್ಯೋತಿ ಮೇಡಮ್, ಎಲ್ಲವೂ ನಮ್ಮಕೈಲಿರುವುದಿಲ್ಲ ಎಂಬುದು ನಿನ್ನೆಯ ನನ್ನ ಅನಿವಾರ್ಯತೆಗೆ ಕಾರಣ, ನಿಮ್ಮ ಕರೆಗೆ ಬರುತ್ತೇನೆಂದು ಸೂಚ್ಯವಾಗಿ ಹೇಳಿದ್ದರೂ ನಿಮ್ಮ ಪುಸ್ತಕಗಳ ಬಿಡುಗಡೆಗೆ ಬರಲು ಸಾಧ್ಯವಾಗದ ಬೇಸರ ಮನದಲ್ಲಿದೆ. ಇದೇ ಮೊದಲ್ಲ, ಇದೇ ಕೊನೆಯೂ ಅಲ್ಲ-ಇನ್ನೂ ಹಲವು ಇದಕ್ಕಿಂತಾ ಉತ್ತಮ ಕೃತಿಗಳು ನಿಮ್ಮಿಂದ ಹೊರಬರಲಿ ಎಂದು ಹಾರೈಸುತ್ತೇನೆ, ವೈದೇಹಿಯವರ ಬೆನ್ನುಡಿ ಇಷ್ಟವಾಯಿತು ಎಂಬುದನ್ನೂ ಹೇಳಲು ಮರೆಯುವುದಿಲ್ಲ.

ಮನಸು said...

ಅಭಿನಂದನೆಗಳು ನಿಮ್ಮ ಈ ಪುಸ್ತಕಗಳು ಎಲ್ಲಿ ದೊರೆಯುತ್ತವೆ ತಿಳಿಸಿ.

ತೇಜಸ್ವಿನಿ ಹೆಗಡೆ said...

ಅಕ್ಕ,

ನಿನ್ನೆಯ ಸಮಾರಂಭ ತುಂಬಾ ಸಂತೋಷ ತಂದಿತು. ಸರಳ, ಸುಂದರ, ಚಿಂತನಾಶೀಲ ಕಾರ್ಯಕ್ರಮವಾಗಿತ್ತು. ಇಬ್ಬರು ಮಹನೀಯರ ಕಾವ್ಯಗಳ ರಸದೌತಣ ನಮಗೆ ಉಣಬಡಿಸಿದ್ದಕ್ಕೆ ತುಂಬಾ ಧನ್ಯವಾದ.

ಅಂದ ಹಾಗೆ ಶೋಭನಾ ಅವರ ಹಾಡುಗಳೂ ಇಂಪಾಗಿದ್ದವು. ಹಾಡಿನ ಸಾಹಿತ್ಯವೂ ಇಷ್ಟವಾಯಿತು. :) I have recorded one Song.. :)

AntharangadaMaathugalu said...

ನಮಸ್ಕಾರ ಹಾಗೂ ಅಭಿನಂದನೆಗಳು ಜ್ಯೋತಿಯವರಿಗೆ. ಸಮಾರಂಭ ಚೊಕ್ಕವಾಗಿತ್ತು. ನಿಮ್ಮ ಹಾಗೂ ಆತ್ಮೀಯ ತ್ರಿವೇಣಿಯವರ ಭೇಟಿ ನನಗೆ ತುಂಬಾ ಖುಷಿ ಕೊಟ್ಟಿತು.

ಶ್ಯಾಮಲ

ಸುಪ್ತದೀಪ್ತಿ suptadeepti said...

ವಿ.ಆರ್.ಭಟ್, ಮನಸು, ತೇಜು, ಶ್ಯಾಮಲಾ, ಮತ್ತೊಮ್ಮೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಹರಕೆ ನನಗೆರಡು ರೆಕ್ಕೆ.

ಮನಸು, ನಿಮ್ಮ ವಿಳಾಸಕ್ಕೆ ಪುಸ್ತಕಗಳನ್ನು ಅಂಚೆ ಮೂಲಕ ತಲುಪಿಸಬಹುದು, ವಿಳಾಸ ಮೈಲ್ ಮಾಡಿ. ಅಥವಾ... ಇದೇ ಜುಲೈ ಒಂಭತ್ತು ಹತ್ತನೇ ತಾರೀಕಿನಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಅಮೆರಿಕನ್ನಡೋತ್ಸವದಲ್ಲಿ ಪ್ರತಿಗಳು ದೊರೆಯುತ್ತವೆ, ಪಡೆಯಬಹುದು. ಯಾವುದೇ ಪುಸ್ತಕದಂಗಡಿಗೆ ಇನ್ನೂ ಕೊಟ್ಟಿಲ್ಲ.

ತೇಜು, ಶ್ಯಾಮಲಾ, ನೀವೆಲ್ಲ... ಎಲ್ಲ... ಸೇರಿದ್ದರಿಂದಲೇ ಸಮಾರಂಭಕ್ಕ ಕಳೆ, ಸಂಭ್ರಮ. ವಂದನೆಗಳು ನಿಮಗೆಲ್ಲ.