ಸಮ್ಮೋಹನ ಚಿಕಿತ್ಸೆ- ಎರಡನೇ ಹೆಜ್ಜೆ
ಸ್ನೇಹಿತರೆ,
ಮಣಿಪಾಲದಲ್ಲಿ ಇನ್ನರ್ ಲೈಟ್ ವೆಲ್ನೆಸ್ ಸೆಂಟರ್ ಆರಂಭವಾದ ಸುದ್ದಿ ತಿಳಿಸಿದಾಗ ಶುಭಾಶಯಗಳನ್ನು ಅಭಿನಂದನೆಗಳನ್ನು ಸಲ್ಲಿಸಿದ್ದೀರಿ. ಮತ್ತೊಮ್ಮೆ ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು.
ಇನ್ನರ್ ಲೈಟ್ ಮಂಗಳೂರಿಗೂ ಬೆರಳುಚಾಚಿದೆ. ಪ್ರತೀ ಶನಿವಾರ (ಹಬ್ಬದ ದಿನಗಳನ್ನು ಹೊರತಾಗಿ) ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ/ರಾತ್ರೆಯ ತನಕ ಮಂಗಳೂರು ನರ್ಸಿಂಗ್ ಹೋಂನಲ್ಲಿ ಇರುವ ವ್ಯವಸ್ಥೆಯಾಗಿದೆ. ಈ ವಿಷಯವನ್ನೂ ನಿಮ್ಮೊಡನೆ ಹಂಚಿಕೊಳ್ಳುವ ಸಂತಸ ನನ್ನದು.
ಈಗಾಗಲೇ ಮಣಿಪಾಲದಲ್ಲಿ ಕೆಲವು ಗ್ರಾಹಕರಿದ್ದಾರೆ. ಮಂಗಳೂರಿನ ಕೆಲವು ಗ್ರಾಹಕರು ಮಣಿಪಾಲದತನಕ ಬರುವ ಅನಾನುಕೂಲತೆಯನ್ನು ವ್ಯಕ್ತಪಡಿಸಿದರು. ಆದರೂ ಮೊದಲ ವಾರ ಅಲ್ಲಿಂದಲೂ ಬಂದು ಹೋದರು. ಅವರ ಅನಾನುಕೂಲತೆ ನನಗೂ ಅರ್ಥವಾಗುತ್ತದೆ. ಹೀಗಿರುವಾಗ ಬಂಧುಗಳೊಬ್ಬರ ಮೂಲಕ ಸ್ನೇಹಸೇತುವಿಗೆ ಹೊಸದೊಂದು ಕೊಂಡಿ ಸೇರಿ, ಅವರ ಮುಖೇನ ಮಂಗಳೂರು ನರ್ಸಿಂಗ್ ಹೋಂನಲ್ಲಿ ಒಂದು ಪರೀಕ್ಷಣಾ ಕೊಠಡಿ ನಮಗಾಗಿ ತೆರೆದಿರುವ ಒಪ್ಪಂದವಾಗಿದೆ.
ಮಂಗಳೂರಿಗರು ಓದಿಕೊಂಡಿರಾ?
ನೀವೂ ಬರುವಿರಾದರೆ ಭೇಟಿಯ ಸಮಯ ನಿಗದಿಗೊಳಿಸಲು ಸಂಪರ್ಕಿಸಿ:
88610 38936
innerlightmanipal@gmail.com
9 comments:
ಧಾರವಾಡದವರು ಏನು ಮಾಡಬೇಕು?
ಸದ್ಯಕ್ಕಂತೂ ಧಾರವಾಡದವರು ಮಣಿಪಾಲಕ್ಕೆ ಇನ್ನರ್ ಲೈಟ್ಗೆ (ನಮ್ಮನೆಗೇ) ಬರಬಹುದಲ್ಲ. ಆದರದ ಸ್ವಾಗತ.
ಇಲ್ಲವಾದರೆ... ಅಲ್ಲೇ ಯಾರಾದರೂ ಥೆರಪಿಸ್ಟ್ ಇದ್ದಾರಾ ಅಂತ ಹುಡುಕಿದರೇನೇ ಆಗಬಹುದೇನೋ!
ಜ್ಯೋತಿ ಅಕ್ಕ...
ಅಭಿನಂದನೆ.
ನನ್ನ ಮನಸ್ಸಲ್ಲಿ ಈವಾಗ ಏನಿರತ್ತೆ ಅಂತ ಕೆಲವೊಮ್ಮೆ ನಂಗೇ ಗೊತ್ತಿರಲ್ಲ, ಆ ಬಗ್ಗೆ ತಿಳ್ಕೋಬೇಕು. ಮತ್ತೆ ಹಿಂದಿನ್ ಜನ್ಮ ಏನಾದ್ರೂ ನಂಗೂ ಇತ್ತ? ಅಂತೆಲ್ಲ ತಿಳ್ಕೊಳ್ಳೋ ಆಸೆ ಈಗ ಬರ್ತಿದೆ. ನೀವು ಇಲ್ಲಿದ್ದಾಗ ಒಂದಿನ ನೆನಪಾಗಿದ್ರೂ ನೀವು ಥೆರಪಿ ಕೊಡ್ತಿದ್ರಿ ಅಲ್ವ? ಒಂದೇ ಒಂದ್ಸಲ ನಂಗೆ ಆ ಯೋಚನೆ ಬರ್ಲಿಲ್ವಲ್ಲ ಅಂತ ಈಗ ಮರುಗ್ತಾ ಇದೀನಿ :-(
ಪ್ರೀತಿಯಿಂದ,
-ಶಾಂತಲಾ
ಧಾರವಾಡದವರಿಗೆ ಬೇಂದ್ರೆ ಸಾಹಿತ್ಯನೆ ಸಮ್ಮೋಹಿನಿ ಚಿಕಿತ್ಸೆ ಅಲ್ಲವಾ!
ತಮ್ಮ ಹೊಸ ಶಾಖೆಗೆ ಶುಭವಾಗಲಿ.
ಶಾಂತಲಾ,
ಧನ್ಯವಾದಗಳು ತಂಗೀ.
ನಮ್ಮ ಗುರುಗಳು ಹೇಳುವ ಹಾಗೆ, ನಿನ್ನ ಮನಸ್ಸಿನ ಬಗ್ಗೆ ತಿಳಿಯಲು, ಪೂರ್ವಜನ್ಮದ ಬಗ್ಗೆ ತಿಳಿಯಲು ಇನ್ನೂ "ಟೈಮ್ ಈಸ್ ನಾಟ್ ರೈಟ್(ರೈಪ್)". ಇಲ್ಲವಾಗಿದ್ದಲ್ಲಿ ನಾವಲ್ಲಿದ್ದಾಗಲೇ ನಿನಗದು ನೆನಪಾಗಿರೋದು. ಮರುಗಬೇಕಾದ್ದಿಲ್ಲ. ಸಮಯ ಬಂದಾಗ ತಾನಾಗೇ ಅವೆಲ್ಲ ಈಡೇರುತ್ತವೆ, ನೋಡುತ್ತಿರು.
ಸೀತಾರಾಮ್ ಸರ್,
ಹಾರೈಕೆಗೆ ವಂದನೆಗಳು.
ಸತ್ಯವಾದ ಮಾತು ಹೇಳಿದಿರಿ. ಧಾರವಾಡದವರಿಗೆ (ಬೇಂದ್ರೆ ಸಾಹಿತ್ಯದ) ಸಾಧನಕೇರಿಯಲ್ಲೊಂದು ಸುತ್ತು ಸಾಕು ಸಮ್ಮೋಹನಕ್ಕೆ ಒಳಗಾಗಲು. ತದನಂತರದ ಚಿಕಿತ್ಸಕ ನಿರ್ದೇಶಗಳಿಗೆ ಮಾತ್ರ ಯಾರಾದರೂ ಚಿಕಿತ್ಸಕರೇ ಬೇಕು. ಅದಕ್ಕವರು ಮಣಿಪಾಲಕ್ಕೇ ಬರಬೇಕು(!). ಏನಂತೀರಿ?
ಅಭಿನಂದನೆಗಳು ಜ್ಯೋತಿ.
ನಿಮ್ಮ ಅನುಭವಗಳನ್ನು ಬರೀತಾ ಇರಿ.
ಶುಭವಾಗಲಿ.
ನಮಸ್ತೆ ರಮ್ಯ. ನನ್ನ ಅಕ್ಷರಂಗಳಕ್ಕೆ ಮತ್ತೊಮ್ಮೆ ಸ್ವಾಗತ. ಜೊತೆಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಕೂಡಾ.
ಜ್ಯೋತಿಯವರೇ, ಈ ಎರಡು ವರ್ಷಗಳಲ್ಲಿ ತುಂಬಾ ಬದಲಾವಣೆಗಳಾಗಿವೆ ಬ್ಲಾಗ್ ಲೋಕದಲ್ಲಿ!! ನೀವು ಈಗ ಭಾರತದಲ್ಲಿರುವಿರೆಂದು ತಿಳಿದು ತುಂಬಾ ಆಶ್ಚರ್ಯವೂ ಆನಂದವೂ ಆಯಿತು.. ನಿಮ್ಮನ್ನು ಈ ಮೈಲ್ ಮೂಲಕ ಸಂಪರ್ಕಿಸಬಹುದೇ?
ನಮಸ್ತೆ ಶೀಲಾ,
ಖಂಡಿತವಾಗಿಯೂ ಮಿಂಚಂಚೆಯ ಮೂಲಕ ಸಂಪರ್ಕಿಸಬಹುದು. ಇಲ್ಲಿ ಕೊಟ್ಟಿರುವ ದೂರವಾಣಿ ಸಂಖ್ಯೆ ನನ್ನದೇ. ಮಿಂಚಂಚೆಯೂ ನನ್ನದೇ. ಯಾವುದಾದರೂ ಸರಿ. ನಿಮ್ಮ ಪ್ರತಿಕ್ರಿಯೆ ನೋಡಿ ನನಗೂ ಸಂತೋಷವಾಗಿದೆ. ಕಳೆದುಹೋಗಿದ್ದ ಗೆಳತಿ ಮತ್ತೆ ದೊರಕಿದ್ದಾಳೆ.
Post a Comment