ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday, 13 December, 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೧೨

ಕ್ಯಾನಿಯನ್ ಲ್ಯಾಂಡ್ಸ್- ಕಣಿವೆಗಳ ಸಾಮ್ರಾಜ್ಯ....
ಸೆಪ್ಟೆಂಬರ್ ೬, ಭಾನುವಾರ

ಶನಿವಾರದಂದು ಆರ್ಚಸ್ ನ್ಯಾಷನಲ್ ಪಾರ್ಕಿನಲ್ಲಿ ಕಿವಿಗೆ ಬಿದ್ದ ಸುದ್ದಿಯ ದಾರಿಯನ್ನು ಹಿಡಿದು ಇಂದು ಕ್ಯಾನಿಯನ್ ಲ್ಯಾಂಡ್ಸ್ ನೋಡಿಕೊಂಡೇ ಸಾಲ್ಟ್ ಲೇಕ್ ಸಿಟಿ ಕಡೆಗೆ ಸಾಗುವ ನಿರ್ಧಾರ ಮಾಡಿದ್ದಾಗಿತ್ತು. ಹಾಗೆಂದೇ ಭಾನುವಾರದ ಆಲಸ್ಯಕ್ಕೆ ಬೆಳಗ್ಗೆಯೇ ಬೈ ಬೈ ಹೇಳಿದ್ದೆ. ಆದ ಕಾರಣ ಬೇಗನೇ ಕ್ಯಾಂಪ್ ಸೈಟ್ ಖಾಲಿ ಮಾಡಿ ಹೊರಡಲು ಸಾಧ್ಯವಾಯ್ತು. ಒಂಭತ್ತೂವರೆಯ ಹೊತ್ತಿಗೆ ಹೈವೇಯಿಂದ ಕ್ಯಾನಿಯನ್ ಲ್ಯಾಂಡ್ಸ್ ಮುಖ್ಯದ್ವಾರದತ್ತ ಸಾಗುವ ಬೈವೇ ಹಿಡಿದೆವು. ಅಲ್ಲೇ ಒಂದು ನೋಟಕತಾಣದಿಂದ ಕಾಣುವ ಈ ಎರಡು ಬಂಡೆಗಳಿಗೆ ಯುದ್ಧನೌಕೆಗಳ ಹೆಸರುಗಳು:

‘ಮಾನಿಟರ್’ ಮತ್ತು ‘ಮೆರಿಮ್ಯಾಕ್’ (Monitor and Merimac)


ಅಲ್ಲಿಂದ ಹೊರಟು ಉತ್ತರದ ಮುಖ್ಯದ್ವಾರದ ಹತ್ತಿರ ಬಂದಾಗ ಗಂಟೆ ಹತ್ತು.


ಕ್ಯಾನಿಯನ್ ಲ್ಯಾಂಡ್ಸ್ ಮುಖ್ಯವಾಗಿ ಮೂರು ವಿಭಾಗಗಳಲ್ಲಿದೆ. ಆಗ್ನೇಯದಲ್ಲಿ ‘ದ ನೀಡಲ್ಸ್’, ನೈಋತ್ಯದಲ್ಲಿ ‘ದ ಮೇಜ಼್’ ಹಾಗೂ ಉತ್ತರದಲ್ಲಿ ‘ಐಲ್ಯಾಂಡ್ ಇನ್ ದ ಸ್ಕೈ’. ನಾವು ಉತ್ತರದಿಂದ ಪಾರ್ಕಿನೊಳಗೆ ಬಂದು, ಅರ್ಧ ದಿನದ ಸಮಯ ಇಟ್ಟುಕೊಂಡಿದ್ದರಿಂದ ‘ಆಕಾಶದಲ್ಲಿನ ದ್ವೀಪ’ವೊಂದನ್ನೇ ಅರೆಬರೆಯಾಗಿ ನೋಡಿಕೊಂಡು ಓಡಿ ಬಂದೆವು.

ಅಲ್ಲಿನ ಮುಖ್ಯ ತಾಣಗಳಲ್ಲಿ ಕೆಲವೇ ಕೆಲವು ನಿಮಿಷ ಸುತ್ತಾಡಿ, ಸಿಕ್ಕಿದಷ್ಟನ್ನು ಕ್ಯಾಮರಾದೊಳಗೆ ಸೇರಿಸಿಕೊಂಡೆವು.

ಕಲ್ಲು ಚಪ್ಪಡಿಗಳನ್ನೇ ಪೇರಿಸಿ ಮಾಡಿದ ದಾರಿಗಂಬಗಳು ("Rock Cairns" )- ಕಾಲುದಾರಿಯನ್ನು ಗುರುತಿಸಲು ಪ್ರಾಕೃತಿಕ ಉಪಾಯ.
‘ಒಳಹೊರಗು ಗೋಪುರ’ ("Upheavel Dome")- ಈ ಹೊಂಡದ ಬಗೆಗೆ ಕೆಲವಾರು ವಿವರಣೆಗಳಿವೆ.


ಅಲ್ಲೇ ಬದಿಯ ಬಂಡೆಯಲ್ಲಿ ನಿಂತ ಮಳೆನೀರಿಗೆ ಎಂಥ ರುಚಿಯಿತ್ತು...?


ಹೋಲ್ ಮ್ಯಾನ್ ಸ್ಪ್ರಿಂಗ್ ಓವರ್ ಲುಕ್


ಗ್ರೀನ್ ರಿವರ್ ಓವರ್ ಲುಕ್


ಯೋಸೆಮಿಟಿಯ ಹಾಫ್ ಡೋಮ್ ಗೊತ್ತಲ್ಲ! ಅದರ ತಮ್ಮ ಇಲ್ಲೂ ಒಂದು: ಪುಟಾಣಿ ಹಾಫ್ ಡೋಮ್


ಕಾಲುಹಾದಿಯ ಬದಿಗೆ ಪ್ರಾಕೃತಿಕ ಬೇಲಿ


ಗ್ರ್ಯಾಂಡ್ ವ್ಯೂ ಪಾಯಿಂಟ್ ಓವರ್ ಲುಕ್:


‘ವ್ಹಿರ್ಲ್ ವಿಂಡ್ ವಿಸಿಟ್’ ಅನ್ನುವುದನ್ನ ಅಕ್ಷರಶಃ ಪಾಲಿಸಿ ಕ್ಯಾನಿಯನ್ ಲ್ಯಾಂಡ್ಸ್‍ನ ‘ಆಕಾಶ ದ್ವೀಪ’ದಿಂದ ಹೊರಟಾಗ ಒಂದೂವರೆಯ ಸುಮಾರು. ಇಲ್ಲಿಂದ ಸಾಲ್ಟ್ ಲೇಕ್ ಸಿಟಿಗೆ ಸುಮಾರು ನಾಲ್ಕು ಗಂಟೆಯ ಹಾದಿ. ಅದನ್ನು ಪಯಣಿಸಿ, ಹೋಟೆಲ್ ರೂಂ ಹಿಡಿದು ಒಮ್ಮೆಗೆ ‘ಉಸ್ಸಪ್ಪಾ’ ಎಂದೆ (ಸುತ್ತಾಟವು ಸುಸ್ತು ಮಾಡುತ್ತೆ, ಅದೂ ಕೊನೆಕೊನೆಯಲ್ಲಿ). ಮತ್ತೆ ಬಟ್ಟೆ ಬದಲಿಸಿಕೊಂಡು ಉಪ್ಪಿನ ನಗರಿಯಲ್ಲಿ ಸಣ್ಣದೊಂದು ಪ್ರದಕ್ಷಿಣೆ ಬರಲು ಹೊರಟೆವು. ಅದರ ವಿವರಣೆ ಮುಂದಿನ ಕಂತಿಗೆ.

4 comments:

ಸೀತಾರಾಮ. ಕೆ. / SITARAM.K said...

amazing land!!!
thanks for information & sharing beautiful photos

ಸುಪ್ತದೀಪ್ತಿ suptadeepti said...

ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು, ಸೀತಾರಾಮ್ ಸರ್. ಹೀಗೇ ಬರುತ್ತಿರಿ, ಬರೆಯುತ್ತಿರಿ.

sritri said...

ಜ್ಯೋತಿ, ಚಿತ್ರ ಮತ್ತು ವಿವರಣೆ ಎರಡೂ ಚೆನ್ನಾಗಿ ಬರುತ್ತಿವೆ. ಉಪ್ಪಿನ ನಗರಿಗೆ ಆ ಹೆಸರು ಬರಲು ಏನಾದರೂ ಕಾರಣವಿದೆಯೇ?

ಸುಪ್ತದೀಪ್ತಿ suptadeepti said...

ಥ್ಯಾಂಕ್ಸ್ ಕಣೇ, ವೇಣಿ.
ಸುತ್ತಾಟದ ಭರದಲ್ಲಿ ನೀನು ಹಿಂದೆ ಬಿದ್ದಿದ್ದನ್ನು ನಾನು ಗಮನಿಸಿರಲೇ ಇಲ್ಲ ಅಂದುಕೋಬೇಡ. ನಿನ್ನ ವೇಗದಲ್ಲೇ ನೀನು ಆರಾಮಾಗಿ ಬಾ ಅಂತ ಬಿಟ್ಟಿದ್ದೆ, ಅಷ್ಟೇ.