ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Thursday, 22 May 2008

ಒಂದು ಬಿನ್ನಹ:

ಪ್ರಿಯ ಓದುಗರೇ,
"ಹರಿವ ಲಹರಿ"ಯೆಂಬ ಹೆಸರಿದ್ದ ಈ ಬ್ಲಾಗ್ ಈಗ ಹೊಸ ನಾಮಕರಣ ಹೊಂದಿದೆ. ಇದೀಗ "ಸುಪ್ತದೀಪ್ತಿ Inner Light" ಎನ್ನುವ ಹೊಸ ರೂಪದಿಂದ ಮುಂದುವರಿಯಲಿದೆ. ಈ ಅಂಗಳ ಇನ್ನು ಮುಂದೆ "ನಮ್ಮ-ನಿಮ್ಮೊಳಗೆ" ಮತ್ತು "ಆತ್ಮಚಿಂತನ"ದಂಥ ಮಾಹಿತಿ ಸಂವಹನಕ್ಕೆ ಮತ್ತು ಚರ್ಚೆಗೆ ಸೀಮಿತ.

ಇಲ್ಲಿ ಹರಿದಾಡುತ್ತಿದ್ದ ಲಹರಿಯ ಹರಿವನ್ನು ಹೊಸದೊಂದು ಅಂಗಳಕ್ಕೆ ತಿರುಗಿಸಲಾಗಿದೆ. ಕವನ, ಕಥೆ, ಹರಟೆ, ಲೇಖನ, ಪ್ರಬಂಧ- ಇವೆಲ್ಲ ಸಾಹಿತ್ಯಿಕ ಬರಹಗಳು ಅಲ್ಲಿ ಉಸಿರಾಡುತ್ತಿವೆ, ಬೆಳಕು ಕಾಣಲಿವೆ. ನಿಮ್ಮ "ಹರಿವ ಲಹರಿ" ಅಲ್ಲಿಯೂ ಸಶಕ್ತವಾಗಿ ಹರಿಯುವಂತೆ ಪ್ರೋತ್ಸಾಹಿಸುವಿರಾಗಿ ನಂಬಿಕೆ.

ಈ ಅಂಗಳಕ್ಕೆ ಅಲ್ಲಿಂದಲೂ, ಅಲ್ಲಿಗೆ ಇಲ್ಲಿಂದಲೂ ಸುಲಭದಲ್ಲೇ ಕಾಣುವಂತೆ ಮುಖ್ಯಪುಟದಲ್ಲಿಯೇ ಕೊಂಡಿಗಳೂ ಇವೆ.

ಬನ್ನಿ, ಓದಿ, ಪ್ರತಿಕ್ರಿಯಿಸಿ; ಎರಡೂ ಅಂಗಳಗಳಲ್ಲಿ ನಿಮ್ಮ ಹೆಜ್ಜೆ ಗುರುತುಗಳಿರಲಿ.

14 comments:

sunaath said...

ಜ್ಯೋತಿ,
ನನ್ನ ಸಂತೋಷ ದ್ವಿಗುಣವಾಯಿತು.
-ಸುನಾಥ ಕಾಕಾ

Anonymous said...

ಹೊಸ ದಿಕ್ಕಿನತ್ತ ಓಡುತ್ತಿರುವ ಹರಿವ ಲಹರಿಗೆ ಶುಭಾಶಯಗಳು.

ಸುಪ್ತದೀಪ್ತಿ suptadeepti said...

ಸುನಾಥ ಕಾಕಾ ಮತ್ತು ವೇಣಿ, ಇಬ್ಬರಿಗೂ ಧನ್ಯವಾದಗಳು.

ಶಾಂತಲಾ ಭಂಡಿ (ಸನ್ನಿಧಿ) said...

ಜ್ಯೋತಿ ಅಕ್ಕಾ...
"ಹರಿವಲಹರಿ" ಹಾಗೂ "ಸುಪ್ತದೀಪ್ತಿ"ಗಳಿಗೆ ಶುಭಾಶಯಗಳು.

ಸುಪ್ತದೀಪ್ತಿ suptadeepti said...

ಧನ್ಯವಾದ ಶಾಂತಲಾ.

Anonymous said...

ಸಂತಸವಾಯಿತು.

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಕಿಶೋರ.

ಸಿಂಧು sindhu said...

ಶುಭಾಶಯ ಜ್ಯೋತಿ,

ಒಳಗಿನ ಕತ್ತಲಲ್ಲಿ ಸುಪ್ತವಾಗಿದ್ದೂ ಹೊಳೆಯುತ್ತ, ಹೊರಗಿನ ಬೆಳಕಲ್ಲಿ ಲಹರಿ ತೇಲುತ್ತ ಮನಸ್ಸಿಗೆ ಖುಶಿ ಕೊಟ್ಟೇ ಕೊಡುತ್ತದೆ ಎಂಬ ವಿಶ್ವಾಸವಿದೆ. ಒಳ್ಳೆಯದಾಗಲಿ,

ಪ್ರೀತಿಯಿಂದ
ಸಿಂಧು

sunaath said...

ಜ್ಯೋತಿ,
ಸದ್ಗುಣಗಳ ಬಗೆಗೆ ನನಗೆ ಯಾವಾಗಿನಿಂದಲೂ ಒಂದು ಅನುಮಾನವಿದೆ. ಕೂಸು ಹುಟ್ಟಿದಾಗ ಅದು amoral ಇರುತ್ತದೆ. ಅದು ವ್ಯಕ್ತಿಯಾಗಿ ರೂಪುಗೊಳ್ಳುತ್ತಿರುವಾಗ ಅದರ ಮೇಲೆ ಪ್ರಭಾವ ಬೀರುವ ಭಾವನೆ ಎಂದರೆ ತಾನು ಯಾವ ರೀತಿಯಲ್ಲಿ behave ಮಾಡಿದರೆ, ತನಗೆ reward ಸಿಗುವದು, ಯಾವ ರೀತಿಯಲ್ಲಿ behave ಮಾಡಿದರೆ ತನಗೆ punishment ಸಿಗುವದು ಎನ್ನುವದು. ಅಂದರೆ, ಕೂಸು ವ್ಯಕ್ತಿಯಾಗುತ್ತ ಕಲಿಯುವದು survival mechanism. ಅರ್ಥಾತ್ all virtues are survival mechanisms ಮತ್ತು all bad qualities are also survival mechanisms.
ಮತ್ತೂ ಒಂದು ಆಸಕ್ತಿಕಾರಕ ವಿಷಯವಿದೆ. Wolfgang Kohler ಎನ್ನುವ ಜರ್ಮನ್ ವಿಜ್ಞಾನಿಯು, ಚಿಂಪಾಂಜಿಗಳ ಅಧ್ಯಯನ ಮಾಡುತ್ತಿದ್ದಾಗ ಹೇಳಿದ ಒಂದು ಮಾತು. “ ಈ ಚಿಂಪಾಂಜಿಗಳ ಗುಂಪಿನಲ್ಲಿ ಒಂದು ಅತ್ಯಂತ ಒಳ್ಳೆಯ ಚಿಂಪಾಂಜಿ ಇದೆ; ಇದು ಅತ್ಯಂತ ದಡ್ಡ ಚಿಂಪಾಂಜಿಯೂ ಹೌದು ”. ಅಂದರೆ, ದಡ್ಡರಷ್ಟೇ ಒಳ್ಳೆಯವರಾಗುವರು ಎಂದೆ? ಇದಕ್ಕೆ support ಆಗಿ ಮತ್ತೊಂದು ಉದಾಹರಣೆ ಕೊಡುವೆ.
ಅನೇಕ ವರ್ಷಗಳ ಹಿಂದೆ ಜಪಾನದ ನದಿ ತೀರದಲ್ಲಿ (--ಅಥವಾ ಸಮುದ್ರ ತೀರದಲ್ಲಿ?--) ವಿಜ್ಞಾನಿಗಳು ಮಂಗಗಳ ಅಧ್ಯಯನ ನಡೆಸುತ್ತಿದ್ದರು. ನದಿ ದಂಡೆಯ ಮೇಲೆ ಸೇಂಗಾ ಕಾಳುಗಳನ್ನು ಒಗೆದಾಗ, ಉಸುಕಿನಿಂದ ಸೇಂಗಾ ಕಾಳುಗಳನ್ನು ಬೇರ್ಪಡಿಸುವ ಜಾಣ ವಿಧಾನವನ್ನು ಒಂದು ಮಂಗ ಕಂಡು ಹಿಡಿಯಿತು. ಸೇಂಗಾ ಹಾಗು ಉಸುಕಿನ mixtureಅನ್ನು ತೆರೆಗಳ ಮೇಲೆ ತೂರಿ, ಕೆಳಗೆ ಬೀಳುತ್ತಿರುವ washed ಕಾಳುಗಳನ್ನು ಹಿಡಿಯುವದೇ ಈ ವಿಧಾನ. ಎಲ್ಲ ಮಂಗಗಳೂ ಈ ವಿಧಾನ ಅನುಸರಿಸಿದವು, except ಒಂದು ಮಂಗ. ಇತರ ಮಂಗಗಳು ತೂರಿದ ಕಾಳುಗಳನ್ನು ಈ ಮಂಗ ಹಿಡಿಯಲು ಪ್ರಾರಂಭಿಸಿತು. So smart !
ಹಾಗಿದ್ದರೆ, ಯಾವುದು ಸದ್ಗುಣ? ಯಶಸ್ವಿಯಾಗುವದೇ ಸದ್ಗುಣವೆ? ಸದ್ಯದ ಜಾಗತಿಕ ನಾಗರಿಕತೆಯು ಅದನ್ನೇ ಕಲಿಸುತ್ತಿದೆಯೆಲ್ಲವೆ? ಇದು ಅತ್ಯಂತ ನೈಸರ್ಗಿಕ ಗುಣ. ಆದರೆ, ನಿಸರ್ಗವು ಎಲ್ಲಾ speciesಗಳಲ್ಲೂ ಮತ್ತೂ ಒಂದು ನೈಸರ್ಗಿಕ ಗುಣವನ್ನು ಇಟ್ಟಿದೆ. ಅದೇನೆಂದರೆ survival of the group or society is more important than the survival of the individual. ನಾವು ಯಾರನ್ನು ಕೆಟ್ಟವರೆಂದು ತಿಳಿದುಕೊಂಡಿರುತ್ತೇವೆಯೋ, ಅವರೂ ಸಹ ಆಪತ್ತಿನ ಸಮಯದಲ್ಲಿ ಸಮಾಜಕ್ಕಾಗಿ ತಮ್ಮ ಬಲಿದಾನ ಮಾಡಿದ್ದನ್ನು, ಇತಿಹಾಸದಲ್ಲಿ ನೋಡಿದ್ದೇವೆ, ಅಲ್ಲವೆ?
ನಿನ್ನ ಅಭಿಪ್ರಾಯವೇನು?

ಸುಪ್ತದೀಪ್ತಿ suptadeepti said...

ಸಿಂಧು ಮತ್ತು ಸುನಾಥ್ ಕಾಕಾ, ಇಬ್ಬರಿಗೂ ಧನ್ಯವಾದಗಳು.

ಕಾಕಾ, ನಿಮ್ಮ ಅನುಮಾನದ ಬಗ್ಗೆ ನನ್ನ ಅಭಿಪ್ರಾಯವನ್ನು ಹೊಸದೊಂದು ಲೇಖನವಾಗಿಸಿ ಸದ್ಯದಲ್ಲಿಯೇ ಪೋಸ್ಟಿಸುತ್ತೇನೆ (ಚುನಾವಣೆ ಮುಗಿದದ್ದರಿಂದ ಇದು ಚುನಾವಣಾ ಭರವಸೆಯೆನ್ನುವ ಅಪಾಯವಿಲ್ಲವಲ್ಲ).

ಪಯಣಿಗ said...

Congratulations and thank you for letting your thoughts shine in this inspiring way. I am sure many dark questions will see the light in coming days.

On a lighter vein, if I was asked to advertise your web site, I would have said something like this....

Some day perhaps the inner light will shine forth from us, and then we will need no other light (J Wolfgang.)

Until then SuptaDeepti Inner Light

Best wishes

ಸುಪ್ತದೀಪ್ತಿ suptadeepti said...

ಪಯಣಿಗ, ನಿಮ್ಮ ಪ್ರೀತಿಭರಿತ ಪ್ರೊಮೋಷನ್ ಪದಗಳಿಗಾಗಿ ಧನ್ಯವಾದಗಳು.

urbhat [Raj] said...

suptadeepti.blogspot.com... is under new management now..??

ಸುಪ್ತದೀಪ್ತಿ suptadeepti said...

ರಾಜೇಂದ್ರ, ಹೊಸ ಮ್ಯಾನೇಜ್ಮೆಂಟ್ ಏನಲ್ಲ; ಅದೇ ಕಂಪನಿ, ಹೊಸ ಹೆಸರು ಅಷ್ಟೇ...
ಹಳೆ ದೇಹಕ್ಕೆ ಹೊಸ ಬಟ್ಟೆ.