ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Wednesday, 5 December, 2007

ಆತ್ಮ ಚಿಂತನ- ೧೦

ಗಂಭೀರವಾದ ಪ್ರಶ್ನೆಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ, ಎಲ್ಲರೂ ಉತ್ತರಿಸುವಿರಾಗಿ ನಂಬಿಕೆಯೊಂದಿಗೆ:

"ನಿಮ್ಮ ಕಲ್ಪನೆಯಲ್ಲಿ- ದೇವರು ಯಾರು? ಏನು? ಎಲ್ಲಿದ್ದಾನೆ/ಳೆ (ಎಲ್ಲ್ಲಿದೆ)? ಹೇಗಿದ್ದಾನೆ/ಳೆ (ಹೇಗಿದೆ)?"

23 comments:

Anonymous said...

ಪ್ರೀತಿಯ ಜ್ಯೋತಿಅಕ್ಕ,
ನನ್ನ ಅನಿಸಿಕೆ ಎಷ್ಟು ನಿಜ ಗೊತ್ತಿಲ್ಲ, ಎಲ್ಲರಲ್ಲಿಯೂ ದೈವತ್ವವನ್ನು ಕಾಣಬಲ್ಲ ದೇವನೊಬ್ಬ ಎಲ್ಲರೊಳಗೂ ಇದ್ದಾನೆ ಎಂಬುದು ನನ್ನ ಅನಿಸಿಕೆ.(ಎಲ್ಲರಲ್ಲಿಯೂ ಕಾಣುವ ಒಳ್ಳೆಯತನವೇ ಹಲವುಬಾರಿ ದೈವವೇನೋ ಎನಿಸಿಬಿಡುತ್ತದೆ.)
-ಶಾಂತಲಾ ಭಂಡಿ

Jagali bhaagavata said...

I am god. God is great....ಅಂತ ಉಪೇಂದ್ರ ಹೇಳಿದ್ದು ಕೇಳಿಲ್ವಾ? ಗಂಭೀರವಾದ ಪ್ರಶ್ನೆಗೆ ಗಂಭೀರವಾದ ಉತ್ತರ ಅದು.

ವಿ.ರಾ.ಹೆ. said...

ನನ್ನ ಪ್ರಕಾರ ,ನನ್ನ ಕಲ್ಪನೆಯಲ್ಲಿ,

ನಮಗಿಂತಲೂ ಉನ್ನತವಾದುದ್ದೊಂದು ಈ ಜಗತ್ತಿನಲ್ಲಿ ಇದೆ ಎಂಬ ಭಾವನೆಯ ಭೌತಿಕರೂಪವೇ ದೇವರು.

ದೇವರು ಎಂಬುದು ಭಕ್ತಿ(ಬೇಡಿದರೆ, ಪೂಜಿಸಿದರೆ ಕೊಡುತ್ತಾನೆ,ಒಳ್ಳೆಯದಾಗುತ್ತದೆ ಇತ್ಯಾದಿ)ಆಗಿರದೆ ಒಂದು ಗೌರವಕ್ಕೆ ಪಾತ್ರವಾದುದಂತಹುದಾದ್ದರಿಂದ ಅದು ಇರುವುದು ನಮಗೆ ಹಿತವೆನಿಸುವ ಒಳ್ಳೆತನದಲ್ಲಿ, ಪ್ರೀತಿಯಲ್ಲಿ, ನಂಬಿಕೆಯಲ್ಲಿ (ಅದು ನಮ್ಮದೇ ಆಗಿದ್ದರೂ ಆಗಬಹುದು) ಮತ್ತು ಅದ್ಬುತವೆನಿಸುವ ಪ್ರಕೃತಿಯಲ್ಲಿ.

ದೇವರು ಹೇಗಿದೆ ಎಂಬುದಕ್ಕೆ ಅವರವರು ಕಂಡುಕೊಂಡ ಅನುಭವದ ರೂಪದಲ್ಲಿದೆ ಎನ್ನಬಹುದು.

ಮೆದುಳಿನ ನರಗಳಲ್ಲಿ ರಕ್ತ ಚಲನೆ ಮಾಡಿಸಿದ್ದಕ್ಕೆ ಸುಪ್ತದೀಪ್ತಿಗೆ ಧನ್ಯವಾದಗಳು :)

sritri said...

"ದೇವರು ಯಾರು? ಏನು? ಎಲ್ಲಿದ್ದಾನೆ/ಳೆ (ಎಲ್ಲ್ಲಿದೆ)? ಹೇಗಿದ್ದಾನೆ/ಳೆ (ಹೇಗಿದೆ)?"

ಜ್ಞಾನಿಗಳು ಯುಗಯುಗಗಳಿಂದ ಕೇಳಿಕೊಳ್ಳುತ್ತಾ ಬಂದಿರುವ, ಇನ್ನೂ ಉತ್ತರ ಸಿಗದಿರುವ ಪ್ರಶ್ನೆಯನ್ನು ನಮ್ಮಂತಹ ಬಡಪಾಯಿಗಳಿಗೆ ಕೇಳಿದರೆ ಹೇಗೆ? :) ಇರಲಿ ಉತ್ತರಿಸಲು ಪ್ರಯತ್ನಿಸುತ್ತೇನೆ.

ಶಾಂತಲಾ ಹೇಳಿದಂತೆ ಒಳ್ಳೆಯತನವನ್ನು ನೋಡಿದಾಗ ದೈವಿಕ ಅನ್ನಿಸುತ್ತದೆ. ಸೌಂದರ್ಯ ಅದರಲ್ಲೂ ಪ್ರಕೃತಿ ಸೌಂದರ್ಯವನ್ನು ನೋಡಿದಾಗ ಅದು ದೇವರ ರೂಪವೇ ಎಂದು ಗಾಢವಾಗಿ ಅನಿಸಿದೆ. (ಈ ಸೃಷ್ಟಿ ಎಂಥ ಚೆಲುವಿನಾಲಯ, ಸೌಂದರ್ಯದ ಈ ನೆಲ ದೇವಾಲಯ!) ಈಗ ನಮ್ಮ ಮನೆಯ ಹೊರಗೆ ರಾಶಿ ರಾಶಿ ಹಿಮ ಸುರಿಯುವುದನ್ನು ನೋಡುತ್ತಿದ್ದೇನೆ. ನನಗೆ ದೈವ ಸಾಕ್ಷಾತ್ಕಾರವಾಯಿತು!!!

Supreeth.K.S said...

ಎಷ್ಟೇ ವರ್ಷಗಳ ಕಾಲ ಯೋಗಿಗಳು ಚಿಂತಿಸಿದರೂ ಇದಕ್ಕೆ ಉತ್ತರ ಕಂಡುಹಿಡಿಯಲಾಗಲಿಲ್ಲ ಎಂಬುದು ಸುಳ್ಳು. ಏಕೆಂದರೆ ‘ದೇವರು’ ಅಂತ ನಾವು ಹೆಸರಿಟ್ಟು, ದೇವರು ಸರ್ವಶಕ್ತ, ದೇವರು ತಂದೆ, ತಾಯಿಅಂತೆಲ್ಲಾ ಹೇಳಿಬಿಟ್ಟಮೇಲೆ ನಮ್ಮ ದೇವರು ಸೃಷ್ಟಿಯಾಗಿಬಿಟ್ಟಿದ್ದಾನೆ. ದೇವರು ಎನ್ನುವ ಪದ ‘ಸತ್ತಾಗಿದೆ’.
ಇನ್ನು ನನ್ನ ಅನುಭವ ಸಣ್ಣದೇ ಆದರೂ ಅಭಿಪ್ರಾಯ ತಿಳಿಸುವಲ್ಲಿ ಅದು ಅಡ್ಡಿಯಾಗದು ಎನ್ನುವೆ.
ಮನುಷ್ಯನಿಗೆ ತನ್ನ ಮೇಲೆ ತನಗೆ ಯಾವಾಗ ನಂಬಿಕೆ ಹೊರಟು ಹೋಗುತ್ತದೆಯೋ ಆಗ ಬಾಹ್ಯ ನಂಬಿಕೆಯ ಆಸರೆ ಪಡೆಯುತ್ತಾನೆ. ತನ್ನಲ್ಲಿಲ್ಲದ ಸಾಮರ್ಥ್ಯ, ಗುಣಗಳನ್ನು ಹೊರಗಿನ ಮೂಲದಲ್ಲಿ ಕಾಣಲು ಬಯಸುತ್ತಾನೆ ಅದರ ಫಲವೇ ದೇವರು ಹುಟ್ಟುತ್ತಾನೆ.
ಮನುಷ್ಯನ ದುರ್ಬಲತೆಯಲ್ಲಿಯೇ ಹುಟ್ಟುತ್ತಾನೆ ದೇವರು...


--------
http://kalaravablog.blogspot.com

ಶ್ಯಾಮಾ said...

"ದೇವರು ಯಾರು? ಏನು? ಎಲ್ಲಿದ್ದಾನೆ/ಳೆ (ಎಲ್ಲ್ಲಿದೆ)? ಹೇಗಿದ್ದಾನೆ/ಳೆ (ಹೇಗಿದೆ)?"

ಇದನ್ನು ಉತ್ತರಿಸಬೇಕೆಂದು ಯೋಚಿಸಿದಾಗ ನಾನು ಬಹಳ ಚಿಕ್ಕವಳು ಅನ್ನಿಸಿತು. ಆದರೂ ಅನ್ನಿಸಿದ್ದನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿಡುವ ಪ್ರಯತ್ನ.

ದೇವರು ಎಂದರೆ ನಂಬಿಕೆ. ನಮ್ಮ ನಂಬಿಕೆಯಲ್ಲೇ ದೇವರಿದ್ದಾನೆ/ಳೆ. ಒಳ್ಳೆಯತನ, ಪ್ರೀತಿ ಎಲ್ಲದರಲ್ಲೂ ದೇವರಿದ್ದಾನೆ/ಳೆ ಏಕೆಂದರೆ ಒಳ್ಳೆಯತನ, ಪ್ರೀತಿ ಎಲ್ಲದಕ್ಕೂ ನಂಬಿಕೆ ಏನ್ನುವುದೇ ಅಡಿಪಾಯ.

"ಮನುಷ್ಯನ ದುರ್ಬಲತೆಯಲ್ಲಿಯೇ ಹುಟ್ಟುತ್ತಾನೆ ದೇವರು..." ಅಂತ ಸುಪ್ರೀತ್ ಅವರು ಹೇಳಿದ್ದು ನನ್ನ ಅಭಿಪ್ರಾಯದಲ್ಲಿ ಸರಿ ಅಲ್ಲ ಅನ್ನಿಸುತ್ತಿದೆ. ದೇವರು ಅನ್ನುವುದು ನಮ್ಮಲ್ಲಿ ದೌರ್ಬಲ್ಯವನ್ನು ಹುಟ್ಟು ಹಾಕುವುದಿಲ್ಲ ಬದಲಿಗೆ ಶಕ್ತಿ ತುಂಬುತ್ತದೆ ಏಕೆಂದರೆ ಅದು ನಮ್ಮೊಳಗಿನ ನಂಬಿಕೆ.

ದೇವರ ಇರುಹು ಅವರವರ ನಂಬಿಕೆಗೆ ಬಿಟ್ಟಿದ್ದಾದರೂ "ದೇವರೂ ಇದ್ದೇ ಇದ್ದಾನೆ" ಅಥವ "ದೇವರು ಇಲ್ಲವೇ ಇಲ್ಲ" ಎನ್ನುವ
ದೃಢ ಚಿತ್ತ ಯಾರಿಗಿರುವುದೋ ಅವರೊಡನೆ ನಾನಿದ್ದೇನೆ ಎಂದು ಶ್ರೀಕೃಷ್ಣ ಹೇಳಿದ್ದನೆಂದು ಅಮ್ಮಮ್ಮ ಒಮ್ಮೆ ಹೇಳಿದ್ದು ನೆನಪಾಯ್ತು.

parijata said...

ಬಹಳ ಕಷ್ಟವಾದ ಪ್ರಶ್ನೆಯನ್ನು ಕೇಳಿದ್ದೀರಿ. ದೇವರು ಎಂಬುದೊಂದನ್ನು ನಿಖರವಾಗಿ ಕಲ್ಪಿಸಿಕೊಳ್ಳಲು ನನಗೆ ಇದುವರೆಗೂ ಸಾಧ್ಯವಾಗಿಲ್ಲ. ಆದರೂ ಬಹಳ ಸಲ ನಮ್ಮೆಲ್ಲರೊಳಗೆ, ನಮ್ಮೆಲ್ಲರ ಹಿಂದೆ ಅದಾವುದೋ ಅವ್ಯಕ್ತವಾದ ಶಕ್ತಿ ನಿಂತು ತನಗೆ ಬೇಕಾದುದನ್ನು ಮಾಡಿಸಿಕೊಳ್ಳುತ್ತದೆ ಎನ್ನುವ ಭಾವನೆ ಉಂಟಾಗುತ್ತದೆ. ಅದು ದೇವರು ಎಂದು ಅನ್ನಿಸುತ್ತದೆ.

ಇಡಿಯ ವಿಶ್ವದಲ್ಲಿಯೇ godless ಅನ್ನುವುದು ಯಾವುದೂ ಇಲ್ಲ. ಒಳ್ಳೆಯತನ, ನಂಬಿಕೆ ಮುಂತಾದ ಸದ್ಗುಣಗಳೇ ಅಲ್ಲದೆ ಎಲ್ಲದರಲ್ಲಿಯೂ 'ದೇವರು' ಎಂಬುದೊಂದು ಇದೆ ಎಂದು ನನ್ನ ನಂಬಿಕೆ.

ಸುಪ್ತದೀಪ್ತಿ suptadeepti said...

ಆತ್ಮೀಯ ಓದುಗರೇ, ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು. ಹೊಸಬರಿಗೆ ಸ್ವಾಗತ.

ಇಲ್ಲಿ ಸರಿ ತಪ್ಪುಗಳ ಪ್ರಶ್ನೆ ಇಲ್ಲ. ನನ್ನ ಪ್ರಶ್ನೆ ಸೈದ್ಧಾಂತಿಕವೂ ಅಲ್ಲ. ಸುಮ್ಮನೆ, ಹಗುರಾಗುವ ಪ್ರಯತ್ನ. ನಾನು ಕೇಳಿದ ಪ್ರಶ್ನೆಯಲ್ಲಿ, "ನಿಮ್ಮ ಕಲ್ಪನೆಯಲ್ಲಿ-..." ಅನ್ನುವ ಭಾಗವೂ ಇದೆ, ಅದೇ ಮುಖ್ಯ, ಅದೇ ನನ್ನ ಉದ್ದೇಶ. ಯಾರದೋ ಹೇಳಿಕೆ, ಯಾರದೋ ಬಡಬಡಿಕೆ, ಮತ್ತಾರದೋ ಡಂಭಾಚಾರದ ಉತ್ತರಗಳ ಬದಲು- ನಿಮ್ಮ ಕಲ್ಪನೆ ಏನು, ನಿಮ್ಮ ಮನದೊಳಗಿನ ಮಾತು ಏನು, ನಿಮ್ಮ ನಂಬಿಕೆ ಏನು, ಅದನ್ನು ಇಲ್ಲಿ ಹಂಚಿಕೊಳ್ಳಿ. ಅಷ್ಟು ಸಾಕು.

ಮನಸ್ವಿನಿ said...

ನನ್ನ ಪ್ರಕಾರ ಎಲ್ಲರ ಒಳ್ಳೆತನದಲ್ಲಿ ದೇವರಿದ್ದಾನೆ.

Sheela Nayak said...

ಸುಪ್ತದೀಪ್ತಿಯವರೇ,
ನಿಮ್ಮ ಪ್ರಶ್ನೆ ಓದಿ ತುಂಬಾ ಸಂತೋಷವಾಯಿತು. ಇಲ್ಲಿಯ ತನಕ ನನ್ನಲ್ಲಿ ಈ ಪ್ರಶ್ನೆ ಮೂಡಿಬಂದಿರಲಿಲ್ಲ. ಯಾಕೆಂದರೆ ಬಾಲ್ಯದಲ್ಲಿ ಈ ಜಿಜ್ಞಾಸೆ ಮೂಡುವಷ್ಟು ಮನ ವಿಕಾಸವಾಗಿರಲಿಲ್ಲ. ಆದರೆ ಪ್ರಶ್ನೆಯು ಹೊಂಚುಹಾಕುವಷ್ಟರಲ್ಲಿಯೇ ಉತ್ತರ ಲಭಿಸಿದ್ದರಿಂದ ದೇವರ ಅಸ್ತಿತ್ವದ ಬಗ್ಗೆ ಬಹುಶಃ ನನ್ನಲ್ಲಿ ಯಾವುದೇ ಮತಬೇದವಿಲ್ಲ. ದೇವರು ಖಂಡಿತ ಇದ್ದಾನೆ. ಹಾಗೂ ನನಗೆ ಅದರ ಅನುಭವವಾಗುತ್ತಲೇ ಇದೆ. ಇದರ ಅರ್ಥ ನಾನೇನು ದೊಡ್ಡ ಸಾಧುಸಂತಳಲ್ಲ. ಅಲ್ಲದೆ ಸಾಮಾನ್ಯ ಜೀವಿಯಂತೆ ನಾನೂ ಸಂಸಾರದಲ್ಲಿ ಸುಖ ದುಃಖಗಳನ್ನು ಅನುಭವಿಸುತ್ತಾ ಇದ್ದೇನೆ. ಆದರೂ ನನ್ನ ಅನುಭವಕ್ಕೆ ಬಂದಂತೆ ಪ್ರತಿಯೊಂದು ಕಷ್ಟ ಬಂದಾಗ ಅದನ್ನು ನೆನೆದು ಬೇಸರ ಪಡುವ ಬದಲು ಆ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವ ಶಕ್ತಿ ಆ ಪರಮಾತ್ಮನಿಂದಲೇ ದೊರಕಿದೆ. ಹನುಮಂತನು ನನ್ನ ಬಳಿಯೇ ಇದ್ದು ನನಗೆ ಮಾರ್ಗದರ್ಶನ ಕೊಡುವಂತೆ ಭಾಸವಾಗುತ್ತಿದೆ.

ಇನ್ನು ನಿಮ್ಮ ಪ್ರಶ್ನೆ ದೇವರ ಲಿಂಗದ ಬಗ್ಗೆ- ನಮ್ಮ ಋಷಿಗಳು, ವೇದಗಳು ತಿಳಿಸುವ ಹಾಗೆ ಭಗವಂತ ಯಾವುದೇ ಬಂಧನಕ್ಕೆ ಒಳಗಾಗಿಲ್ಲ. ಆದರೂ ನಾನು ಸಾಮಾನ್ಯ ಹುಲು ಮನುಷ್ಯಳೆ ತಾನೆ! ಹಾಗಾಗಿ ಬಾಲ್ಯದೀಂದಲೇ ನನ್ನ ಅಮ್ಮ ಕಲಿಸಿಕೊಟ್ಟ ದೇವರ ನಾಮಸ್ಮರಣೆ ಮಾಡಿ ಆನಂದ ಪಡುತ್ತೇನೆ. ಒಟ್ಟಾರೆ ನಾನು ಯಾವುದೇ ನಿಯಮಗಳಿಲ್ಲದೇ ನನ್ನ ಮನಸ್ಸಿಗೆ ಅನಿಸಿದಾಗ ನನ್ನಿಷ್ಟ ದೇವರ ನಾಮ ಸ್ಮರಣೆ ಮಾಡುತ್ತೇನೆ. ನನ್ನ ಅಭಿಪ್ರಾಯದಂತೆ ಇಲ್ಲಿ ಭಕ್ತಿ ಮುಖ್ಯ. ಇದು ನನ್ನಲ್ಲಿ ಯಾವುದೇ ಕಲ್ಮಶ ಮೂಡದಂತೆ ಸಹಾಯ ಮಾಡುತ್ತದೆ.


ಹೇಗಿದ್ದಾನೆ? ಬಹುಶಃ ನನ್ನಲ್ಲಿರುವ ಕಲಾವಿದ ನನ್ನ ಭಗವಂತನಿಗೆ ಕಣ್ಣುಕೋರೈಸುವ ಸುಂದರ ರೂಪವನ್ನು ಕಲ್ಪಿಸಲು ಸಹಾಯ ಮಾಡಿದ್ದಾನೆ. ವಿಷ್ಣು ಸಹಸ್ರನಾಮ, ಕೃಷ್ಣಾಷ್ಟೋತ್ತರ, ರಾಮರಕ್ಷಾ ಸ್ತೋತ್ತರ ಮೊದಲಾದ ಸ್ತೋತ್ರಗಳಲ್ಲಿ ವರ್ಣಿಸಿದ ಹಾಗೆ ದೇವರನ್ನು ಕಲ್ಪಿಸಿದ್ದೇನೆ.
ನಿಮ್ಮ ಪ್ರಶ್ನೆ ನನಗೆ ಬಹಳ ದಿನದಿಂದ ನನ್ನ ಬ್ಲಾಗಿನಲ್ಲಿನಲ್ಲಿ ಬರೆಯಬೇಕೆಂದು ಕೊಂಡಿರುವ ವಿಷಯಕ್ಕೆ ಪ್ರೇರಣೆಯಾಯಿತು. ಬಹಷ್ಟು ಘಟನೆಗಳು ದೇವರ ಅಸ್ತಿತ್ವಕ್ಕೆ ಪ್ರಮಾಣವಾದರೂ ಅದನ್ನೆಲ್ಲ ಬರೆದರೆ ಕಲ್ಪಿತ ಕತೆ ಅಥವಾ ಯಾವುದೇ ಪುರಾಣದ ಕಾಪಿಯೆಂದಾಗುವುದು. ಆದರೂ ಆದಷ್ಟು ನನ್ನ ಅಭಿಪ್ರಾಯವನ್ನು ನನ್ನ ಬ್ಲಾಗಿನಲ್ಲಿ ಹಾಕುವ ಧೈರ್ಯಮಾಡಿದ್ದೇನೆ.
ಶೀಲಾ

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು, ಹೊಸಬರಿಗೆ ಸ್ವಾಗತ.

ಜಿಜ್ಞಾಸೆ ಚೆನ್ನಾಗಿಯೇ ಸಾಗಿದೆ, ಸಂತೋಷ. ನನ್ನ ಉತ್ತರವನ್ನು ಆಗಲೇ ಟೈಪಿಸಿ ಇಟ್ಟುಕೊಂಡಿದ್ದೇನೆ, ನಿಮ್ಮೆಲ್ಲರ ಉತ್ತರಗಳಿಂದ ನನ್ನ ಯೋಚನೆಗೆ ಯಾವುದೇ ರೀತಿಯ ಪ್ರೇರಣೆ, ಪ್ರಚೋದನೆ, ಪ್ರಭಾವ ಇರದಿರಲೆಂದು. ಸ್ವಾರ್ಥ ಅನ್ನಿ, ಪರವಾಗಿಲ್ಲ!

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು. ಇನ್ನೂ ಎದುರು ನೋಡುತ್ತಿರುವ ಕೆಲವು ಉತ್ತರಗಳಿವೆ... ಎಲ್ಲರೂ ಬರಲಿ.

Anonymous said...

ದೇವರು ಯಾರೇ ಆಗಿರಲಿ, ಎಲ್ಲೇ ಇರಲಿ, ಹೇಗೆ ಬೇಕಾದರೂ ಇರಲಿ. ನನಗೊಂದು ಸಂದೇಹ ಏನೆಂದರೆ - ದೇವ‘ರು’ ಎಂದು ಬಹುವಚನ, ಎಲ್ಲಿದ್ದಾ‘ನೆ/ಳೆ’ ಎಂದು ಏಕವಚನ! ಸ್ವಾರಸ್ಯಕರವಾಗಿದೆಯಲ್ಲವೇ? ಬಹಳ ರೂಢಿಯಾಗಿಬಿಟ್ಟಿರುವ ಈ ಪದಪ್ರಯೋಗದ anomaly ಬಗ್ಗೆ ಬನ್ನಂಜೆ ಗೋವಿಂದಾಚಾರ್ಯರು ಒಂದುಕಡೆ ಪ್ರಸ್ತಾಪಿಸಿದ್ದರೆಂದು ನೆನಪು.

ಸುಪ್ತದೀಪ್ತಿ suptadeepti said...

ಜೋಶಿ, ನಿಮ್ಮ ಪ್ರಶ್ನೆ ನನಗೂ ಬಂದಿತ್ತು. "ದೇವರು" ಅಂತ ಬರೆಯುವ ಮೊದಲೇ ಯೋಚನೆ ಮಾಡಿದೆ. ಆಮೇಲೆ, "ದೇವ" ಮತ್ತು "ದೇವಿ" ಕ್ರಮವಾಗಿ ಪುರುಷ ಮತ್ತು ಸ್ರೀ ಸೂಚಕ ಪದಗಳಾಗುವ ಕಾರಣ ದೇವರು ಅನ್ನುವ ಪದವನ್ನೇ ಬಳಸಿದೆ. ಜೊತೆಗೆ ಕೆಲವರಿಗೆ ದೇವರು "ದೇವಿ"ಯ ರೂಪದಲ್ಲಿದ್ದರೆ ಇನ್ನು ಕೆಲವರಿಗೆ "ದೇವ" ಪ್ರಿಯನಾಗಿರುತ್ತಾನೆ, ಅದಕ್ಕಾಗಿ "...ನೆ/ಳೆ" ಬಳಸಬೇಕಾಯಿತು. ಮೂಲ ಪ್ರಶ್ನೆಯ ವ್ಯಾಕರಣದ ಬಗ್ಗೆ ನನಗೆ ಸಮಾಧಾನವಿಲ್ಲ.
ಅದರ ಹೊರತಾಗಿ ಪ್ರಶ್ನೆಯೇ ಉತ್ತರವನ್ನು ನಿರ್ದಿಷ್ಟ ಗುರಿಯತ್ತ ಸಾಗಿಸುವ ಹಾಗೆ ಆಗಬಾರದೆಂದು ಈ ರೀತಿ ತಿರುಚಬೇಕಾಯಿತು. ವ್ಯಾಕರಣ ಬದ್ಧತೆ ಇಲ್ಲದ್ದಕ್ಕೆ ಕ್ಷಮೆಯಿರಲಿ.

Anonymous said...

I've always been confused about this, but recently I found out taht 'it's okay to be confused, it's not necessary to have an opinion on every subject' :)

'God is the creation of man' ಅಂತ ಎಲ್ಲೋ ಓದಿದ್ದೆ. ದೇವರು ಇದ್ದಾನೆ/ಇಲ್ಲ ಅನ್ನುವುದು ನಮ್ಮ ಮನಸ್ಸಿನಲ್ಲಿ ಮಾತ್ರ ಅಂತ ಅನಿಸುತ್ತದೆ, it's just a belief. 'ದೇವರು’ ಪುಸ್ತಕದಲ್ಲಿ A N Murthy Rao ಚೆನ್ನಾಗಿ ಬರೆದಿದ್ದಾರೆ.

ಸುಪ್ತದೀಪ್ತಿ suptadeepti said...

A.N.Murthy Rao ದೇವರ ಬಗ್ಗೆ ಹೇಳಿದ್ದು ನನ್ನ-ನಿಮ್ಮ ಅನಿಸಿಕೆಯೂ ಆಗಬೇಕೆಂದಿಲ್ಲ. ನಿಮ್ಮ ಮನದ ಮಾತನ್ನು ತಿಳಿಸಿದ್ದೀರಿ, ಧನ್ಯವಾದಗಳು.

Nempu Guru said...

"ದೇವರು" ಎಂಬುದು ಒಂದು ನಿಗೂಢವಾದ ಶಕ್ತಿ, ತರ್ಕಕ್ಕೆ ನಿಲುಕದ್ದು... ನಮ್ಮೆಲ್ಲಾ ಸುಖ-ದುಃಖಗಳಿಗೆ, ಕಷ್ಟ-ಕಾರ್ಪಣ್ಯಗಳಿಗೆ ನಾವು ಪ್ರಾಮಾಣಿಕತೆಯಿಂದ, ಶುದ್ಧ ಮನಸ್ಸಿನಿಂದ, ಯಾವುದೇ ಮುಚ್ಚುಮರೆಯಿಲ್ಲದೆ ನಮಗೆ ನಾವೇ ಉತ್ತರ ಕಂಡುಕೊಳ್ಳಲು ಬಯಸಿದಾಗ ಅನುಭವಕ್ಕೆ ಬರುವುದೇ ಅಥವಾ ಸಹಾಯಕ್ಕೆ ಬರುವುದೇ "ದೇವರು" ಎಂಬ ಶಕ್ತಿ. ಇದು ನನ್ನ ಅಭಿಪ್ರಾಯ.

ಸುಪ್ತದೀಪ್ತಿ suptadeepti said...

ಗುರು, ನಿನ್ನ ಅಭಿಪ್ರಾಯವೂ ನನ್ನದೂ ಹತ್ತಿರದಲ್ಲಿವೆ...

Anonymous said...

Probably this is one of the oldest yet debatable topic. My views are the following.
There are mainly two kinds of people in this regard.
1. Those who believe in God.
They believe EVERYTHING associated with God including myths, stories, puranas, and "ajji-kathe".
2. Those who claim that they are athiests.
They hate every damn thing associated with God.

Both are two extremes, however, the funny thing is- both have the SAME fundamental nature, which is - they cling to "something", this something could be either "yes" for god or "no" for god. This is the fundamental nature of mind - that it clings to SOMETHING. Mind cannot exist without clinging to SOMETHING. It doesnot matter whether it is God or No-God, the fundamental nature of mind is - it HAS to cling to something.
On this logic, those who believe in God cling to God, wheras athiests cling to "their arguments". The same thing is said by Sri Krishna in Bhagavadgeetha - yAnthi madYajinOpi mAm, yO ya shradhaha, sa eva saha. Those who adore me, gets me, whatever one gets depends upon the quality of his shradhha!.

Some of you claimed that - what ever good thing is GOD!. Then what about the bad things in this world!?, if we accept Vishnu as God, the meaning of Vishnu is "vyApaka" or all pervading.

In essence, my view is, Whether God exists or not? - is NOT the useful question. Rather - Why God exists is more relavent. I used the word "useful" not in the sense that he gives whatever we demand, rather, it gives us a deeper picture of how our ancient culture was commensurate with the concept of God. All our philosophies rely on one thing - a better harmony in life and contentment.

The concept of God prepares us to face this life confidently. If something happens that is NOT our choice, then we think - this is how God wanted and it is God's will. This gives strength to our mind to "accept life as it comes".

Why Harischandra kAvya becomes close to our heart?, why we appreciate naLacharithre than the glorious story of Ravana?. What is more close to our lives is more appealing to us as well.

According to me, there must be some unified energy that is controlling everything macroscopically. For an athiest this is simply energy, for a devotee this is GOD.

regards
Dr.D.M.Sagar (Original)

ಸುಪ್ತದೀಪ್ತಿ suptadeepti said...

ದೇವರ ಬಗ್ಗೆ ತುಂಬಾ ಉದ್ದದ ಉತ್ತರವೇ ಕೊಟ್ಟಿದ್ದೀರಿ ಸಾಗರ್. ಧನ್ಯವಾದಗಳು.

Anonymous said...

Pardon me about the 'length' of the explaination, I thought, as I am talking about the infinite, so let the length be close to that!!
D.M.Sagar

ಸುಪ್ತದೀಪ್ತಿ suptadeepti said...

ಉದ್ದದ ಉತ್ತರ ತಪ್ಪೇನಲ್ಲ. ಆ ವಿಷಯದ ಬಗ್ಗೆ ನೀವು ತುಂಬಾ ಯೋಚಿಸಿದ್ದೀರಿ ಅಂತ ಸೂಚಿಸತ್ತೆ, ಅಷ್ಟೇ!!

Anonymous said...

ಪ್ರಿಯ ಸುಪ್ತದೀಪ್ತಿಯವರೆ,

ಚಿಕ್ಕದಾಗಿ ಹೇಳಬೇಕೆಂದರೆ ತರ್ಕಕ್ಕೆ ನಿಲುಕಲಾರದ್ದು ಕೇವಲ ಅನುಭವಕ್ಕೆ ಮಾತ್ರ ಬರುವಂಥದ್ದು 'ದೇವರು' ಅನಿಸುತ್ತದೆ.

ಸುಪ್ತದೀಪ್ತಿ suptadeepti said...

ಪ್ರಸನ್ನ,
ಧನ್ಯವಾದಗಳು.
ನಿಮ್ಮ ಮಾತು ನನ್ನ ಕಲ್ಪನೆಗೆ ಹತ್ತಿರವಾಗಿದೆ. "ಆತ್ಮ ಚಿಂತನ ೧೧" ನೋಡಿ.