ಸಮ್ಮೋಹನ ಚಿಕಿತ್ಸೆ- ಮೊದಲ ಹೆಜ್ಜೆ
ಸ್ನೇಹಿತರೆ,
ಸಮ್ಮೋಹನ ಚಿಕಿತ್ಸೆ (ಹಿಪ್ನೋಥೆರಪಿ)ಯನ್ನು ಕಲಿತು ಎರಡು ವರ್ಷಗಳಾಗಿವೆ. ಇದೀಗ ನನ್ನ ನೆಲದಲ್ಲೇ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಮಣಿಪಾಲದ ಅನಂತನಗರದಲ್ಲಿರುವ ನಮ್ಮ ಮನೆಯಲ್ಲಿ "ಇನ್ನರ್ ಲೈಟ್ ವೆಲ್‍ನೆಸ್ ಸೆಂಟರ್" ಆರಂಭವಾಗಿದೆ. ಅದರಲ್ಲೇ ಮೊದಲ ಗ್ರಾಹಕರೊಬ್ಬರ ತೊಂದರೆ ನಿವಾರಣೆಯಾಗಿದೆ-ಆರು ಭೇಟಿಗಳಲ್ಲಿಯೇ. ಈ ಖುಷಿಯನ್ನು ನಿಮ್ಮೊಡನೆ ಹಂಚಿಕೊಳ್ಳುವ ಹುಮ್ಮಸ್ಸಿಗೊಂದು ಕಿಟಕಿಯಿದು.
ಆ ಗ್ರಾಹಕರಿಗಿದ್ದ ತೊಂದರೆಯೇನು, ಯಾಕಾಗಿ, ಹೇಗೆ/ಏನು ಮಾಡಲಾಯಿತು ಎಂಬೆಲ್ಲ ವಿವರಗಳನ್ನು ಈಗಲೇ ಕೊಡಲಾರೆ; ಗ್ರಾಹಕರ ವೈಯಕ್ತಿಕ ವಿಷಯಗಳನ್ನು ಮರೆಮಾಚಿಯೂ ಅವನ್ನೆಲ್ಲ ಹೇಳಲು ಸದವಕಾಶ ಇದಲ್ಲ. ಸಮಯ ಬಂದಾಗ ತಿಳಿಸುತ್ತೇನೆ, ಹಾಗೂ ನನ್ನ ಅನುಭವ/ಅಭಿಪ್ರಾಯಗಳನ್ನು ದಾಖಲಿಸುತ್ತೇನೆ.
ನಿಮ್ಮ ಕುತೂಹಲಕ್ಕೆ ಗರಿಗಳೆದ್ದಿರುತ್ತವೆ, ಗೊತ್ತು. ಅದಕ್ಕಾಗಿಯೇ ಇದೆಯಲ್ಲ ಪ್ರತಿಕ್ರಿಯಾ ಪ್ರಕ್ರಿಯೆ. ಕಮೆಂಟಿಸಿ.
ನೀವೂ ಬರುವಿರಾದರೆ ಭೇಟಿಯ ಸಮಯ ನಿಗದಿಗೊಳಿಸಲು ಸಂಪರ್ಕಿಸಿ:
88610 38936
innerlightmanipal@gmail.com