ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Friday, 1 October, 2010

ಸಮ್ಮೋಹನ ಚಿಕಿತ್ಸೆ- ಮೊದಲ ಹೆಜ್ಜೆ

ಸ್ನೇಹಿತರೆ,
ಸಮ್ಮೋಹನ ಚಿಕಿತ್ಸೆ (ಹಿಪ್ನೋಥೆರಪಿ)ಯನ್ನು ಕಲಿತು ಎರಡು ವರ್ಷಗಳಾಗಿವೆ. ಇದೀಗ ನನ್ನ ನೆಲದಲ್ಲೇ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಮಣಿಪಾಲದ ಅನಂತನಗರದಲ್ಲಿರುವ ನಮ್ಮ ಮನೆಯಲ್ಲಿ "ಇನ್ನರ್ ಲೈಟ್ ವೆಲ್‍ನೆಸ್ ಸೆಂಟರ್" ಆರಂಭವಾಗಿದೆ. ಅದರಲ್ಲೇ ಮೊದಲ ಗ್ರಾಹಕರೊಬ್ಬರ ತೊಂದರೆ ನಿವಾರಣೆಯಾಗಿದೆ-ಆರು ಭೇಟಿಗಳಲ್ಲಿಯೇ. ಈ ಖುಷಿಯನ್ನು ನಿಮ್ಮೊಡನೆ ಹಂಚಿಕೊಳ್ಳುವ ಹುಮ್ಮಸ್ಸಿಗೊಂದು ಕಿಟಕಿಯಿದು.

ಆ ಗ್ರಾಹಕರಿಗಿದ್ದ ತೊಂದರೆಯೇನು, ಯಾಕಾಗಿ, ಹೇಗೆ/ಏನು ಮಾಡಲಾಯಿತು ಎಂಬೆಲ್ಲ ವಿವರಗಳನ್ನು ಈಗಲೇ ಕೊಡಲಾರೆ; ಗ್ರಾಹಕರ ವೈಯಕ್ತಿಕ ವಿಷಯಗಳನ್ನು ಮರೆಮಾಚಿಯೂ ಅವನ್ನೆಲ್ಲ ಹೇಳಲು ಸದವಕಾಶ ಇದಲ್ಲ. ಸಮಯ ಬಂದಾಗ ತಿಳಿಸುತ್ತೇನೆ, ಹಾಗೂ ನನ್ನ ಅನುಭವ/ಅಭಿಪ್ರಾಯಗಳನ್ನು ದಾಖಲಿಸುತ್ತೇನೆ.

ನಿಮ್ಮ ಕುತೂಹಲಕ್ಕೆ ಗರಿಗಳೆದ್ದಿರುತ್ತವೆ, ಗೊತ್ತು. ಅದಕ್ಕಾಗಿಯೇ ಇದೆಯಲ್ಲ ಪ್ರತಿಕ್ರಿಯಾ ಪ್ರಕ್ರಿಯೆ. ಕಮೆಂಟಿಸಿ.

ನೀವೂ ಬರುವಿರಾದರೆ ಭೇಟಿಯ ಸಮಯ ನಿಗದಿಗೊಳಿಸಲು ಸಂಪರ್ಕಿಸಿ:
88610 38936
innerlightmanipal@gmail.com

14 comments:

ಗೌತಮ್ ಹೆಗಡೆ said...

ಗುಡ್ ಅಕ್ಕಯ್ಯ :)ನಂದೊಂದ್ ಶುಭಾಶಯ :) ( ಬೆಂಗಳೂರಲ್ಲಿ ಓಪನ್ ಮಾಡಿದ್ರೆ ನಾನೇ ಮೊದಲು ಬರ್ತೇನೆ.ಮಣಿಪಾಲ ದೂರ.ಹೆಹೆ)

Anonymous said...

abhinandanegalu
mala

ತೇಜಸ್ವಿನಿ ಹೆಗಡೆ said...

ಅಕ್ಕಾ,

ತುಂಬಾ ಸಂತೋಷವಾಗುತ್ತಿದೆ. ಮಂಗಳೂರಿಗೆ ಬಂದಾಗ, ಇನ್ನರ್ ಲೈಟ್‌ಗೊಂದು ಬೇಟಿ ಕೊಡ್ಲೇಬೇಕಾಯ್ತು :)All the Best.

sunaath said...

ಜ್ಯೋತಿ,
ನೀವು ಯಾರನ್ನಾದರೂ hypnotise ಮಾಡಬಲ್ಲಿರಿ ಎನ್ನುವದು ಗೊತ್ತಿತ್ತು. (ಬಹುಶ: ಮಹಾದೇವ ಅವರೇ ಸಮ್ಮೋಹಿನಿಗೆ ಒಳಗಾದ ಮೊದಲಿಗರಿರಬಹುದು!)

ಶ್ರೀನಿಧಿ.ಡಿ.ಎಸ್ said...

ಶುಭಾಶಯಗಳು! ಒಳಗಿನ ಬೆಳಕಿಗೆ ಒಳ್ಳೇದಾಗಲಿ.

Shiv said...

ಜ್ಯೋತಿಯವರೇ,

ಅಭಿನಂದನೆಗಳು !
ಯಶಸ್ಸು ಹಿಂಬಾಲಿಸಿ ಯಾವಾಗಲೂ

Subrahmanya said...

Very good. waiting for further updates.

ವಿ.ರಾ.ಹೆ. said...

ಶುಭಾಶಯಗಳು. :-)

ಸೀತಾರಾಮ. ಕೆ. / SITARAM.K said...

ಶುಭಾಶಯಗಳು...
ಅನುಭವ ಕಥನಗಳು ಬರಲಿ...

ವನಿತಾ / Vanitha said...

ಶುಭಾಶಯಗಳು :-)
I was really not knowing much about Hypnotism therapy, recently in Mangalore my Mother in law is revived from her long sufferings..So definitely..this is a good post for me! Thank you :)
So have you moved from Bay area?

- Vanitha.

hEmAsHrEe said...

Hello Jyothi Akka,

Glad to know about your new endeavours.

Best wishes !!!
take care.

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯಿಸಿದ, ಅಭಿನಂದಿಸಿದ, ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದಗಳು. ಮನ ತುಂಬಿದ ಕೃತಜ್ಞತೆಗಳು.

ಗೌತಮ್, ಬೆಂಗಳೂರು ನಂಗೆ ದೂರ ಅಲ್ವೇನೋ! ನಿನ್ ಕೆಲ್ಸ ಆಗ್ಲೇ ಬೇಕಿದ್ರೆ ಎಲ್ಲಿಗಾದ್ರೂ ಬರ್ಬೇಕಪ್ಪ.

ತೇಜು, ಮಂಗಳೂರಿಂದ ಮಣಿಪಾಲಕ್ಕೆ ಹತ್ರಾನೇ. ಹಾಗಾದ್ರೂ ನಮ್ಮನೇಗೆ ಬರ್ತೀಯಲ್ಲ, ಥ್ಯಾಂಕ್ಸ್.

ಕಾಕಾ, ಮಹಾದೇವ್ ಇದುವರೆಗೂ ನನ್ನ (ಮಾತ್ರವಲ್ಲ, ಯಾರದೇ) ಸಮ್ಮೋಹನಕ್ಕೆ ಒಳಗಾಗಿಲ್ಲ ಅಂತ ಹೇಳಿ ನಿಮ್ಮ ಊಹೆಯನ್ನು ಠುಸ್ ಮಾಡುವ ಉದ್ದೇಶ ಅಲ್ಲದಿದ್ದರೂ ಸತ್ಯವನ್ನು ಮರೆಮಾಚಲಿಕ್ಕೆ ಇಷ್ಟವೂ ಇಲ್ಲ ನೋಡಿ.

ವನಿತಾ, ನಿಮ್ಮ ಅತ್ತೆಯವರಿಗೆ ಮಂಗಳೂರಲ್ಲಿ ಯಾರು ಚಿಕಿತ್ಸೆ ನೀಡಿದರೆನ್ನುವ ಮಾಹಿತಿ ತಿಳಿದಿದ್ದರೆ ನನಗೂ ಹೇಳುವಿರಾ? ಬರಹದ ಕೊನೆಯಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ಇಲ್ಲೇ ಬರೀಬೇಕಂತಿಲ್ಲ. ಧನ್ಯವಾದಗಳು, ಈಗಲೇ; ಹಾಗೂ ಅಭಿನಂದನೆಗಳು ನಿಮ್ಮತ್ತೆಗೆ.


ಉಳಿದವರಿಗೆಲ್ಲ ಮತ್ತೊಮ್ಮೆ ವಂದನೆಗಳು, ಧನ್ಯವಾದಗಳು.

ಸಂದೀಪ್ ಕಾಮತ್ said...

Congrats :)

ಸುಪ್ತದೀಪ್ತಿ suptadeepti said...

ಸಂದೀಪ್, ಧನ್ಯವಾದಗಳು.