ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Tuesday 10 November, 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೯

ಬ್ರೈನಿಗೆ ಸರ್ಪ್ರೈಸ್- ಬ್ರೈಸ್ ಕ್ಯಾನಿಯನ್

ಸೆಪ್ಟೆಂಬರ್ ೩ ಗುರುವಾರ.

ಸೆಡಾರ್ ಸಿಟಿಯಿಂದ ಹೊರಟು ಸೆಡಾರ್ ಬ್ರೇಕ್ಸ್ ನೋಡಿಕೊಂಡು, ರೆಡ್ ಕ್ಯಾನಿಯನ್ ಮುಖಾಂತರ ಬ್ರೈಸ್ ಕ್ಯಾನಿಯನ್ ತಲುಪಿದಾಗ ಅಪರಾಹ್ನ ಮೂರೂವರೆ.


ನಮ್ಮ ಕ್ಯಾಂಪ್ ಸೈಟ್ ಕಡೆ ಹೋಗಿ, ನಮ್ಮ ಹೆಸರು ಅಲ್ಲಿ ನಮೂದಾಗಿರುವುದನ್ನು ನೋಡಿ, ವಿಸಿಟರ್ ಸೆಂಟರಿಗೆ ಬಂದೆವು, ಸುಮಾರು ನಾಲ್ಕೂಕಾಲಕ್ಕೆ. ಕಾರಿನ ಸಿಗರೇಟ್ ಲೈಟರ್ ಡಮಾರ್ ಆಗಿದ್ದರಿಂದ ಕ್ಯಾಮರಾ ಬ್ಯಾಟರಿಗಳನ್ನ ಚಾರ್ಜ್ ಮಾಡಲಾಗುತ್ತಿರಲಿಲ್ಲವಲ್ಲ! ನಮ್ಮಿಬ್ಬರ ಕ್ಯಾಮರಾಗಳಿಗೂ ಒಂದೇ ತರದ ಬ್ಯಾಟರಿಗಳು ಮತ್ತು ನಮ್ಮಲ್ಲಿ ಒಂದು ಹೆಚ್ಚುವರಿ ಬ್ಯಾಟರಿಯಿತ್ತು. ನನ್ನ ಕ್ಯಾಮರಾ ಬ್ಯಾಟರಿ ಖಾಲಿಯಾಗುತ್ತಿದ್ದು, ಅದನ್ನು ವಿಸಿಟರ್ ಸೆಂಟರಿನಲ್ಲಿ ಚಾರ್ಜಿಗಿಡಲು ಕೊಟ್ಟೆವು- ಏಳು ಗಂಟೆಯ ಮೊದಲು ಪಡೆಯುತ್ತೇವೆಂಬ ಕರಾರಿನೊಡನೆ.

ಬ್ರೈಸ್ ಪಾಯಿಂಟ್ ಕಡೆ ಹೋದಾಗ ಸಣ್ಣಗೆ ಮಳೆ ಹನಿಯಲಾರಂಭಿಸಿತು. ಕಳೆದ ಬಾರಿ ಸುರಿಯುವ ಹಿಮದಡಿ ನೋಡಿದ ಕೆಂಪು-ಕಿತ್ತಳೆ-ಬೂದು ‘ಹೂಡೂ’ಗಳು ಈ ಸಲ ಎರಡೆರಡು ಬಣ್ಣಬಿಲ್ಲುಗಳ ನೆರಳಲ್ಲಿ ತಲೆಯೆತ್ತಿ ನಿಂತಿದ್ದವು.




‘ದ ಗ್ರೆಟ್ಟೋ’

ಅಲ್ಲಿಂದ ಮುಂದೆ- ಪರಿಯಾ ಪಾಯಿಂಟ್, ಯೊವಿಂಪಾ ಪಾಯಿಂಟ್, ರೈನ್ ಬೋ ಪಾಯಿಂಟ್ ತನಕ ಡ್ರೈವ್ ಹೋಗಿ, ಹಿಂದೆ ಬರುವಾಗ ನಡುನಡುವಿನ ತಾಣಗಳಲ್ಲೆಲ್ಲ ನಿಂತು ನೋಡಿಕೊಂಡು ಬಂದೆವು.








ಕ್ಯಾಮರಾ ಬ್ಯಾಟರಿಯನ್ನು ಹಿಂದಕ್ಕೆ ಪಡೆದು ಸನ್ ಸೆಟ್ ಪಾಯಿಂಟ್ ಕಡೆ ಸವಾರಿ ಸಾಗಿತು. ಸೂರ್ಯಾಸ್ತ ನೋಡಿ, ಅಲ್ಲಿಂದಲೇ ಶುರುವಾಗುವ ಒಂದು ಟ್ರೈಲಿನಲ್ಲಿ, ಅರೆಗತ್ತಲಿನಲ್ಲಿ ಒಂದಷ್ಟು ದೂರ ಕ್ಯಾನಿಯನ್ ಒಳಗೆ ಕೆಳಗೆ ಇಳಿದೆವು.

ಮೂಡಲಲ್ಲಿ ಮೂಡಿ ಬಂದ ತಿಂಗಳಮಾಮ

ಕಣಿವೆಯೊಳಗಿಂದ...


ಸಾಕಷ್ಟು ಮಬ್ಬು ಹರಡಿ ಹೆಜ್ಜೆ ತಪ್ಪಬಹುದೇನೋ ಅನ್ನಿಸುವ ಹಾಗಾದಾಗ ತಿರುಗಿ ಮೇಲೆ ಬಂದು ಕ್ಯಾಂಪ್ ಸೈಟ್ ಸೇರಿ ಕಾರ್ ಹೆಡ್ ಲೈಟ್ ಬೆಳಕಿನಲ್ಲೇ ಟೆಂಟ್ ಪಿಚ್ ಮಾಡಿ, ಊಟ ಮುಗಿಸಿದೆವು. ಮರುದಿನ ಸೂರ್ಯೋದಯ ನೋಡಲು ಹೋಗಬೇಕೆಂದು ನಾಲ್ಕೂವರೆಗೇ ಅಲಾರಂ ಇಟ್ಟುಕೊಂಡು ಮಲಗಿದಾಗ ರಾತ್ರೆ ಹನ್ನೊಂದೇ ದಾಟಿಹೋಯ್ತು.

ಮರುದಿನ- ಶುಕ್ರವಾರ, ಸೆಪ್ಟೆಂಬರ್ ೪.

ಅಲಾರಂ ದನಿಗೆ ಕಷ್ಟದಿಂದಲೇ ಕಣ್ಣುಬಿಟ್ಟು, ಮುಖ ತೊಳೆದುಕೊಂಡು, ಸೂರ್ಯೋದಯ ತಾಣಕ್ಕೆ ಹೋಗಿ ಸೇರಿದಾಗ ಬೇರಾವ ಕಾರ್ ಕೂಡಾ ಅಲ್ಲಿರಲಿಲ್ಲ. ಚಳಿಗಾಳಿ ಗಾಜನ್ನೇ ಕೊರೆಯುವಂತೆ ಸುಳಿಯುತ್ತಿತ್ತು. ಆಗ ನಮ್ಮ ಮೆದುಳಿಗೆ ಸೂರ್ಯನಿಲ್ಲದೆಯೇ ಬೆಳಕಾಯಿತು, ನಾವು ಒಂದು ಗಂಟೆ ಬೇಗನೇ ಬಂದಿದ್ದೆವು. ಅರುಣೋದಯ ಆರು ಗಂಟೆಗೆ. ಕಾರಲ್ಲೇ ಮುಕ್ಕಾಲು ಗಂಟೆ ಕಾದಿದ್ದು ಐದೂಮುಕ್ಕಾಲಿಗೆ ಐವತ್ತು ಹೆಜ್ಜೆ ನಡೆದು ರಿಮ್ ಬದಿಗೆ ಹೋದೆವು. ಅಲ್ಲಾಗಲೇ ಹಲವರು ಜಮಾಯಿಸಿದ್ದರು. ಗಾಳಿ ನಡುನಡುವೆ ಗಸ್ತು ತಿರುಗುತ್ತಿತ್ತು, ಎಲ್ಲರನ್ನೂ ‘ವಿಚಾರಿಸಿಕೊಳ್ಳುತ್ತಾ’. ಫ್ಲಾನೆಲ್ ಅಂಗಿಯ ಮೇಲೆ ಜಾಕೆಟ್, ಅದರ ಮೇಲೆ ಶಾಲು ಸುತ್ತಿಕೊಂಡರೂ ನನ್ನ ಮೂಗಿಗೆ ಗಾಳಿಯ ಸುತ್ತಾಟ ಮೆಚ್ಚುಗೆಯಾಗಲಿಲ್ಲ, ಗುರುಗುಟ್ಟಲು ಶುರುವಿಟ್ಟಿತು.

ಪಡುವಣದಲಿ ಹೊರಳಿನಿಂತ ತಿಂಗಳಮಾಮ



ಆರೂಕಾಲರ ಸಮಯ, ಪೂರ್ವ ರಂಗೇರಿದಾಗಲೂ ನನ್ನ ಮೂಗಿನ ರಂಗಿಳಿಯಲಿಲ್ಲ. ಒಸರು ಕರಗಲಿಲ್ಲ.
ಅಂತೂ ಇಂತೂ ಮರುತನನ್ನೂ ಮೂಗನ್ನೂ ಸಂಭಾಳಿಸಿಕೊಂಡು ಹೊನ್ನಹೊಳೆಯ ಎಳೆಗಳಲ್ಲಿ ಹೂಡೂಸ್ ಮೀಯುವುದನ್ನು ಸೆರೆಹಿಡಿದೆ.




ಅಲ್ಲಿಂದಲೂ ಹೊರಡುವ ಟ್ರೈಲ್ ಹಿಡಿದು ಒಂದಿಷ್ಟು ಕೆಳಗಿಳಿದೆವು.


ಕಣಿವೆಯೊಳಗೆ ಕಿರಣಕೋನ

ಸ್ವಲ್ಪ ಹೊತ್ತು ಸುತ್ತಾಡಿ, ಇನ್ನೊಂದಿಷ್ಟು ಚಿತ್ರ ತೆಗೆದು, ಮೇಲಕ್ಕೆ ಹತ್ತಿ ಬಂದು, ಟೆಂಟ್ ಕಡೆ ಸಾಗಿದೆವು.

ತಿಂಡಿ ಮುಗಿಸಿ, ಟೆಂಟ್ ಬಿಚ್ಚಿ ಹೊರಟು, ಸ್ಪೂರ್ತಿ ಕೊಡುವ ಇನ್‍ಸ್ಪಿರೇಶನ್ ಪಾಯಿಂಟ್ ಮತ್ತು ಮತ್ತೊಮ್ಮೆ ಬ್ರೈಸ್ ಪಾಯಿಂಟ್‍ಗಳಲ್ಲಿ ಸುತ್ತಾಡಿದೆವು.





ಹತ್ತು ನಲ್ವತ್ತಕ್ಕೆ ಹೊರಟು ಕ್ಯಾನಿಯನ್ನಿನ ಗೇಟಿನಿಂದ ನಾಲ್ಕು ಮೈಲು ಹೊರಗಿದ್ದ ‘ಮೊಸ್ಸಿ ಕೇವ್’ ಮತ್ತು ಅದರ ಬಳಿಯೇ ಸಾಗುತ್ತಿದ್ದ ಉಲ್ಲಸಿತ ನೀರ ಝರಿ ನೋಡಿಕೊಂಡು...

ತೆಳ್ಳಗಾಗುವ ತಯಾರಿಯಲ್ಲಿ ‘ಹೂಡೂಸ್’

ಭಾರತದ ನೀಲಿನಕ್ಷೆಗೆ ಎರಡು ಕೋಡು





...ಹೈವೇ ಹಿಡಿದಾಗ ಹನ್ನೊಂದು ನಲವತ್ತು.

ಮುಂದಿನ ಕಂತಿನಲ್ಲಿ- ಗ್ರ್ಯಾಂಡ್ ಸ್ಟೇರ್ ಕೇಸ್ ಎಸ್ಕಲಾಂಟೇ ಮತ್ತು ಕ್ಯಾಪಿಟಲ್ ರೀಫ಼್ ಅನಾವರಣಗೊಳ್ಳಲಿವೆ.

11 comments:

ಸೀತಾರಾಮ. ಕೆ. / SITARAM.K said...

Nice Photos
The Indian map & its two crown is excellent for your simile.
All the best for next round tour.
Waiting for your next experince postings

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಸೀತಾರಾಮ್. ಈಗಷ್ಟೇ ಬರೆದು ಮುಗಿಸಿ, ಫೋಟೋಸ್ ಸೇರಿಸಿ ಪೋಸ್ಟ್ ಮಾಡಿದ್ದೆ, ಅಷ್ಟರಲ್ಲೇ ನಿಮ್ಮ ಪ್ರತಿಕ್ರಿಯೆ... ನಾನು ಕ್ರಮಬದ್ಧವಾಗಿರಲು ಪ್ರೋತ್ಸಾಹ ನೀಡಿವೆ. ವಂದನೆಗಳು.

Govinda Nelyaru said...

ಪೋಟೊಗಳು ಚೆನ್ನಾಗಿವೆ. ತುಂಬಾ ಕುಶಿಯಾಯಿತು.

ಹನ್ನೊಂದು ವರ್ಷ ಹಿಂದೆ ಗೆಳೆಯರ ಜತೆ ಅಲ್ಲಿಗೆ ಹೋದದ್ದು ನೆನಪಾಗುತ್ತಿದೆ.

ಗೋವಿಂದ

ಸುಪ್ತದೀಪ್ತಿ suptadeepti said...

ನಮಸ್ಕಾರ ಭಟ್ರೆ, ನನ್ನೀ ಅಕ್ಷರಲೋಕಕ್ಕೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಹನ್ನೊಂದು ವರ್ಷಗಳ ಹಿಂದೆ ಎಲ್ಲೆಲ್ಲ ಸುತ್ತಾಡಿದ್ದಿರಿ? ಊರಿಗೆ ಬಂದಾಗೊಮ್ಮೆ ನಿಮ್ಮನ್ನು ಭೇಟಿಯಾಗಬಹುದೆ?

ಗೌತಮ್ ಹೆಗಡೆ said...

akkayya bega picasa album ge photo haaku..

ಸುಪ್ತದೀಪ್ತಿ suptadeepti said...

ಹ್ಮ್, ಹೌದು ಕಣೋ ಅದೊಂದು ಕೆಲ್ಸ ಆಗ್ತಾನೇ ಇಲ್ಲ. ಬೇರೆಲ್ಲ ಕಾರ್ಯಭಾರಗಳ ನಡುವೆ ಫೋಟೋಗಳು ಅಡಗಿಹೋಗಿವೆ. ಪಿಕಾಸಾಕ್ಕೆ ಹಾಕಿದಾಗ ನಿಂಗೆ ಲಿಂಕ್ ಕಳಿಸ್ತೇನೆ, ಖಂಡಿತ.

ಅಲೆಮಾರಿ said...

akkayya innondu sanna salahe tammayyaninda. photos innu swalpa clear iro thara maadu akkayya. eno something missing ansutte ..

ಸುಪ್ತದೀಪ್ತಿ suptadeepti said...

ಗೌತಮ್,
ಈ ಎಲ್ಲ ಫೋಟೋಸ್ ದೊಡ್ಡವು, ಸುಮಾರು 4+MB size. ಅವನ್ನೆಲ್ಲ ಹಾಗೇ ಬ್ಲಾಗಿಗೆ ಹಾಕಿದ್ರೆ ಓದುಗರಿಗೆ ಪುಟ ತೆರೆದುಕೊಳ್ಳಲು ತುಂಬಾ ಕಷ್ಟ ಅಂತ ಅವನ್ನೆಲ್ಲ 5X7 size ಮಾಡಿ ಹಾಕ್ತಿದ್ದೇನೆ, ಮತ್ತೇನೂ ಮಾಡಿಲ್ಲ ಕಣೋ. ಆದರೂ ಬ್ಲರ್ ಆಗಿ ಕಂಡರೆ ನಮ್ಮ ಕ್ಯಾಮರದ ಮಿಸ್ಟೇಕ್ ಅಥವಾ ಸರಿಯಾಗಿ ಫೋಟೋ ತೆಗೆಯಲು ಬಾರದ ನಮ್ಮ ತಪ್ಪು. ಇರೋದರಲ್ಲಿ ಸೂಕ್ತವಾದ ಚಿತ್ರಗಳನ್ನ ಇಲ್ಲಿ ಹಾಕ್ತಿದ್ದೇನೆ, ಆಯ್ತಾ? ನಿನ್ನ ಸಲಹೆಗೆ ಥ್ಯಾಂಕ್ಸ್.

ಗೌತಮ್ ಹೆಗಡೆ said...

.ಸರಿ ಅಕ್ಕಯ್ಯ. ಪಿಕಾಸ ಲಿ ಸಾಧ್ಯ ಆದರೆ ದೊಡ್ಡಕೆ ಹಾಕೋಕೆ ಬಂದ್ರೆ ಹಾಕಿರು. ಫೋಟೋಸ್ ಬ್ಲರ್ ಇಲ್ಲ ಅಕ್ಕಯ್ಯ. ನಿ ಹೇಳಿದ್ದು ಸರಿ. ಚಿಕ್ಕದಾಗಿ ಬ್ಲಾಗ್ ಲಿ ಫೋಟೋ ಹಾಕೋ ಕಾರಣಕ್ಕೆ ಏನೋ ಮಿಸ್ಸಿಂಗ್ ಅನ್ಸಿರಬೇಕು ನಂಗೆ:)

ಸುಪ್ತದೀಪ್ತಿ suptadeepti said...

ಗೌತಮ್,
ಪಿಕಾಸಾಕ್ಕೆ ಚಿತ್ರಗಳನ್ನು ಹಾಗೇ ಹಾಕ್ತೇನೆ, ಪೂರ್ಣವಾಗಿಯೇ. ಆದರೆ ಸದ್ಯಕ್ಕಲ್ಲ, ಸ್ವಲ್ಪ ತಡವಾಗಿ.

ಗೌತಮ್ ಹೆಗಡೆ said...

k k