ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Thursday 28 February, 2013

ಇಂತಿ, ಮನುಜ

ಅಟ್ಟ ಸುತ್ತುವ ಬೆಕ್ಕು ಅಟ್ಟುಂಬುದುಂಟೇನು 
ಕಟ್ಟಿಗೆಯ ಕುದುರೆಯದು ಬೆಟ್ಟವೇರುವುದೇ 
ತೊಟ್ಟ ಹಾವಿಗೆ ಹರಿಯೆ ನೆಟ್ಟನಡೆ ಬಹುದೇನು 
ಸಿಟ್ಟುಗೊಂಡರೆ ಕಡಲು  ಮೆಟ್ಟಿ ನಿಲುವೆಯ ಮನುಜ!    

ಬದುಕು ಬವಣೆಗಳಲ್ಲಿ ಎದಕು ಸರಿಬೆಸವಿಲ್ಲ 
ಬೆದಕುವವರೆದೆಯೊಳಗೆ ಮೆದುತನವದಿಲ್ಲ 
ತದುಕಿದರೆ ಭವವೆಂಬ ನದಿಯೊಳಗೆ ಹದವಿಲ್ಲ 
ಅದರಂತರಾರ್ಥದಲಿ ಬದುಕಿರಲಿ ಮನುಜ!    


2 comments:

sunaath said...

ಭಾವ ಬದಲಾದಂತೆ ಛಂದ ಬದಲಾಗುವುದು,
ಒಂದೊಂದು ಋತುವಿಗೆ ಒಂದೊಂದು ಗೆಲುವು!
ನಿಮ್ಮ ಕವನಗಳ ಧಾಟಿಯೇ ಹಾಗೆ,
ಅನುರಾಗ, ವೈರಾಗ್ಯ ಎಲ್ಲಕೂ ಚೆಲುವು!

ನಿಮ್ಮ ಪದ್ಯದ ಭಾವ, ಛಂದಸ್ಸು ಅನುರೂಪವಾಗಿವೆ.

ಸುಪ್ತದೀಪ್ತಿ suptadeepti said...

ನಿಮ್ಮ ಪ್ರೀತಿಯ ಹರಕೆಯೂ ಅದೇನು ಛಂದೋಛಂದ, ಕಾಕಾ!
ಋಣಿ ನಾನು, ನಿಮ್ಮಕ್ಕರೆಯ ಸಕ್ಕರೆಗೆ.