ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Friday 11 July, 2008

ಸ್ನೇಹಿತರಿಗೆಲ್ಲ ಆಮಂತ್ರಣ

ಆತ್ಮೀಯ ಸ್ನೇಹಿತರೇ,
ಜುಲೈ ತಿಂಗಳ ಕೊನೆಯ ಭಾನುವಾರ, 27ನೇ ತಾರೀಕು, ತ್ರಿವೇಣಿ (ತುಳಸಿಯಮ್ಮ) ಮತ್ತು ನನ್ನ ಪುಸ್ತಕಗಳು ಬೆಂಗಳೂರಲ್ಲಿ ಬೆಳಕು ಕಾಣಲಿವೆ. ತ್ರಿವೇಣಿಯ ಅಂಕಣ ಬರಹ "ತುಳಸಿವನ" ಅದೇ ಹೆಸರಲ್ಲಿ ಮರುಮುದ್ರಣವನ್ನೂ ನನ್ನ ಹೊಸ ಕವನ ಸಂಕಲನ "ಭಾವಬಿಂಬ"ವನ್ನೂ ಪ್ರಕಟಿಸಲಿದ್ದೇವೆ.

ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ, ಭಾನುವಾರ ಬೆಳಗ್ಗೆ, 10 ಗಂಟೆಗೆ, ಇವೆರಡೂ ಓದುಗರನ್ನು ಎದುರುಗೊಳ್ಳುವಾಗ ವೇದಿಕೆಯಲ್ಲಿ ಡಾ. ಎಚ್ಚೆಸ್ವಿ, ದೊಡ್ಡರಂಗೇಗೌಡ, ಜೋಗಿ ಉಪಸ್ಥಿತರಿರುತ್ತಾರೆ.

ನೀವುಗಳೆಲ್ಲರೂ ಈ ಆಹ್ವಾನವನ್ನು ಮಾನಿಸಿ, ನಮ್ಮ ಜೊತೆಗಿರಲು ಅಲ್ಲಿಗೆ ಬರಬೇಕೆಂದು ಕೋರುತ್ತೇನೆ.

ಇಂತಿ,
ಜ್ಯೋತಿ (ಸುಪ್ತದೀಪ್ತಿ)

9 comments:

ಶಾಂತಲಾ ಭಂಡಿ (ಸನ್ನಿಧಿ) said...

ಪ್ರೀತಿಯ ಜ್ಯೋತಿ ಅಕ್ಕಾ...
ಅಭಿನಂದನೆಗಳು ನಿಮ್ಮ ಪುಸ್ತಕಗಳು ಬೆಳಕು ಕಾಣುತ್ತಿರುವುದಕ್ಕೆ.

ನಿಮ್ಮ ಆಮಂತ್ರಣಕ್ಕೆ ಹಾಗೂ ನಿಮ್ಮಗಳ ಅಂದದ ಬರವಣಿಗೆಗಳನ್ನು ಶೀಘ್ರದಲ್ಲಿ ನಮ್ಮಗಳ ಕೈಗೆಟುವ ಭಾಗ್ಯ ಒದಗಿಸುತ್ತಲಿರುವುದಕ್ಕೆ ಅನಂತ ಧನ್ಯವಾದಗಳು ಕೂಡ.

ಶುಭ ಹಾರೈಸುತ್ತ...
-ಶಾಂತಲಾ ಭಂಡಿ.

Unknown said...

ಅಭಿನಂದನೆಗಳು ಜ್ಯೋತಿ ಅಕ್ಕಾ. ಕಾಯ್ತಾ ಇದೀನಿ ೨೭ಕ್ಕೆ.

Anonymous said...

SupthadeepthiyavarE,
nimage hAgu ThrivENiyavarige hArthika abhinandanegalu. haa halavu varshagala nanthara illi kuLithu oLLe bhavageethe kEluva avakaasha kalpisiddakke thumba dhanyavadhagalu. neevu happy & safe trip mugisi barOvarege hELu manasE kELtha hADikoLtha irtheeni.(hELu manasE nammane fridge mEle kuLithu yaavagloo hElu manasE anthaa irutthe, thumbaanE ishTa aaythu.)thanks kaNree.
PSP

Anonymous said...

ನಿಮ್ಮ ಭಾವ ರಸಪೂರ್ಣ ಬರಹಗಳು ಬೆಳಕುಕಾಣುತ್ತಿರುವುದಕ್ಕೆ ಸಂತಸವಾಗುತ್ತಿದೆ.

ಶುಭವಾಗಲಿ.

ಗಣೇಶ್.ಕೆ

Anonymous said...

ವಿಳಾಸವನ್ನು ಇನ್ನೂ ಸ್ಪಷ್ಟವಾಗಿ, ಲ್ಯಾಂಡ್ ಮಾರ್ಕ್ ಗಳೊಂದಿಗೆ ತಿಳಿಸಿದ್ದರೆ, ಚೆನ್ನಾಗಿರ್ತಿತ್ತು.

Unknown said...

ನಿಮ್ಮೀ ಆಮಂತ್ರಣಕ್ಕೆ ವಂದನೆಗಳು

ಕೆಲಸದ ಒತ್ತಡದಿಂದಾಗಿ ರಜೆ ಸಿಗುವುದು ಕಷ್ಟ. ಹಾಗಾಗಿ ಬೆಂಗಳೂರಿಗೆ ಬರುವುದು ಸಾಧ್ಯ ಆಗಲಾರದು. ಬರಲು ಎಲ್ಲ ಪ್ರಯತ್ನವನ್ನೂ ಮಾಡುವೆ.

ಅದೇನೇ ಇರಲಿ, ನಿಮ್ಮ ವಿಶ್ವಾಸದ ಕರೆಗೆ ಉತ್ತರವಾಗಿ, ಕಾರ್ಯಕ್ರಮವು ಸುಸೂತ್ರವಾಗಿ, ನೋಡುಗ, ಓದುಗ, ವಿಶ್ವಾಸಿಗಳೆಲ್ಲರ ಮನದಲ್ಲಿ ಚಿರಕಾಲ ಉಳಿಯುವಂತಾಗಿಸಲು - ಆ ಸರ್ವಶಕ್ತನಲಿ ನಾ ಬೇಡುವೆನು.

ನೀವು ನೀಡುತ್ತಿರುವ ಭೂರಿ ಭೋಜನವು ಬರಿಯ ಭೋಜನವಾಗದೇ ಬಹುಜನರನ್ನು ಗೆಲ್ಲುವಂತಾಗಲಿ - ಎಲ್ಲರ ಜ್ಞಾನದ ಹಸಿವು ಇಂಗುವಂತಾಗಲಿ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

ಸುಪ್ತದೀಪ್ತಿ suptadeepti said...

ಶಾಂತಲಾ, ಮಧು, ಪಿ.ಎಸ್.ಪಿ., ತವಿಶ್ರೀ, ಗಣೇಶ್,
ಎಲ್ಲರಿಗೂ ಧನ್ಯವಾದಗಳು.

ಗಣೇಶ್,
ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿರುವ ಕಾಂಪ್ಲೆಕ್ಸಿನ ಹತ್ತಿರವೇ ಇದೆ ಈ ಸುಚಿತ್ರ ಫಿಲ್ಮ್ ಸೊಸೈಟಿ.

ವಿಳಾಸಕ್ಕೆ ಇಲ್ಲಿ ನೋಡಿ:

http://thatskannada.oneindia.in/literature/book/2008/0724-tulasivana-bhavabimba-book-release.html

Unknown said...

ಪ್ರಿಯ ಆತ್ಮೀಯ ಸ್ನೇಹಿತರೆ,

ನಿಮ್ಮ ಅಂತರ್ಜಾಲ ಬಹಳ ಸುಂದರವಾಗಿದೆ.

ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

http://kannadahanigalu.com/

ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದು.

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

ಧನ್ಯವಾದಗಳೊಂದಿಗೆ.....
Kannadahanigalu Team
kannadajokes@gmail.com

ಸುಪ್ತದೀಪ್ತಿ suptadeepti said...

Thank you Kannada hanigalu team. Surely I'll add your blog to my list. Keep visiting.