ನಮ್ಮ-ನಿಮ್ಮೊಳಗೆ... ೦೧
ಓದುಗರೇ,
ಈ ಅಂಗಳ ನನ್ನ ಅಕ್ಷರಗಳ ಬಿತ್ತರಕ್ಕೆ ಸೀಮಿತವಾಗಿ ನಿಂತಿತ್ತು ಇಷ್ಟು ದಿನ. ಈಗ ಇದನ್ನು ಇನ್ನೊಂದು ಹೆಜ್ಜೆ ಮುಂದಕ್ಕೆ ಒಯ್ಯುವ ಪ್ರಯತ್ನ ಮಾಡುತ್ತಿದ್ದೇನೆ, ಅದಕ್ಕೆ ನಿಮ್ಮೆಲ್ಲರ ಸಹಕಾರ, ಉತ್ಸಾಹ ಮುಖ್ಯ.
ಇದುವರೆಗೆ ಹಲವಾರು ಕ್ಷೇತ್ರಗಳಲ್ಲಿ ಕಲಿಕೆಯ ಉದ್ದೇಶದಿಂದ ತೊಡಗಿಸಿಕೊಂಡಿದ್ದೆ. ಅಲ್ಲೆಲ್ಲ ಸಿಕ್ಕ ಅಲ್ಪ-ಸ್ವಲ್ಪ ತಿಳುವಳಿಕೆಗಳನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳುವ ಯೋಚನೆ-ಯೋಜನೆ ಇದು.
Psychology, Hypnosis/ Hypnotherapy, Regression/ Regression to past life as therapy, General Physical Fitness, Nutrition- ಈ ವಿಷಯಗಳ ಬಗ್ಗೆ ಪ್ರಶ್ನೋತ್ತರದ ರೀತಿಯಲ್ಲಿ ಮಾಹಿತಿ-ಸಂವಹನ ಇಲ್ಲಿ ನಡೆಯಲಿ. ನಿಮ್ಮ ಪ್ರಶ್ನೆಗಳಿಗೆ, ಸಂಬಂಧಪಟ್ಟ ಮಾಹಿತಿಗಳಿಗೆ ಈ ಅಂಗಳ ತೆರೆದುಕೊಳ್ಳುತ್ತಿದೆ.
ಬನ್ನಿ, ಓಡಾಡಿ, ಓದ್ಯಾಡಿ...
ಪ್ರತಿಕ್ರಿಯೆ-೦೧:
ಸುನಾಥರ ಸಂದೇಹ:
Regression ಬಗೆಗೆ ನನಗೊಂದು ಮೂಲಭೂತ ಸಂದೇಹವಿದೆ. Regression ಆದಾಗ ಎರಡು ಸಾಧ್ಯತೆಗಳು ನನಗೆ ಕಾಣುತ್ತವೆ:
೧ನೆಯ ಸಾಧ್ಯತೆ: Regressionಗೆ ಒಳಗಾದ ವ್ಯಕ್ತಿ ತನ್ನ ಪೂರ್ವಜನ್ಮದ ಘಟನೆಗಳನ್ನು ನೆನಪಿಸಿಕೊಳ್ಳುವನು.
೨ನೆಯ ಸಾಧ್ಯತೆ: ಗತಕಾಲದ ಎಲ್ಲ ಘಟನೆಗಳು ಅಭೌತಿಕ spaceನಲ್ಲಿ ತೇಲುತ್ತಿದ್ದು, regression ಆದ ವ್ಯಕ್ತಿ,ಈ ಘಟನೆಗಳಿಗೆ tune ಆದರೆ, ಅವು ತನ್ನವೇ ಅನುಭವ ಎಂದು ಭಾವಿಸಬಹುದು.
ಆದುದರಿಂದ, ಯಾವುದು ನಿಜವಿರಬಹುದೆನ್ನುವದರ ಬಗೆಗೆ verification ಅಥವಾ validation ಮಾಡಲು ಸಾಧ್ಯವೆ? ಆ ತರಹ ಮಾಡಲಾಗಿದೆಯೆ?
ಪ್ರತಿಕ್ರಿಯೆ:
ರೆಗ್ರೆಷನ್ ಅನ್ನುವ ಪದದ ಸಾಮಾನ್ಯ ಅರ್ಥ, ಸಮ್ಮೋಹನಕ್ಕೆ ಸಂಬಂಧಪಟ್ಟಂತೆ, "ಪೂರ್ವ ಸ್ಮೃತಿ" ಎಂದಷ್ಟೇ. ಅದು ಪೂರ್ವ ಜನ್ಮದ್ದಾಗಿರಲಿ, ಬಾಲ್ಯದ್ದಾಗಿರಲಿ, ಅಥವಾ ನಿನ್ನೆಯ ಸಂಜೆಯಷ್ಟೇ ತಿಂದ ವಿಶಿಷ್ಠ ತಿಂಡಿಯದ್ದಾಗಿರಲಿ- ಇವೆಲ್ಲವೂ ಪೂರ್ವ ಸ್ಮೃತಿಗಳೇ. ಇವನ್ನೆಲ್ಲ ನೆನಪಿಸಿಕೊಳ್ಳುವುದೂ ರೆಗ್ರೆಷನ್ ಎಂದೇ ಪರಿಗಣಿತ.
ನಮ್ಮ ಆಗಿಂದಾಗಿನ ನೆನಪುಗಳು ಸುಮಾರು ಇಪ್ಪತ್ನಾಲ್ಕು ಘಂಟೆಗಳವರೆಗೆ, ಅಥವಾ ನಾವು ಒಮ್ಮೆ ನಿದ್ರಿಸುವವರೆಗೆ ನಮ್ಮ ಜಾಗೃತಪ್ರಜ್ಞಾವಲಯದಲ್ಲಿ (`ಕಾನ್ಷಿಯಸ್ ಮೈಂಡ್'ನಲ್ಲಿ) ಇರುತ್ತವೆ. ನಿದ್ರಿಸಿದ ಹೊತ್ತಿಗೆ (ಅಥವಾ ಇಪ್ಪತ್ನಾಲ್ಕು ಘಂಟೆಗಳ ಬಳಿಕ) ಅವು ನಮ್ಮ ಕ್ರಿಟಿಕಲ್ ಮೈಂಡ್ ದಾಟಿಕೊಂಡು ಸುಪ್ತಮನಸ್ಸಿನ (ಸುಪ್ತಪ್ರಜ್ಞೆಯ, ಸಬ್-ಕಾನ್ಷಿಯಸ್ ಮೈಂಡಿನ) ಪದರಕ್ಕೆ ಸೇರುತ್ತವೆ. ನಮ್ಮೆಲ್ಲಾ ನೆನಪುಗಳು, ಪೂರ್ವ ಸ್ಮೃತಿಗಳು ಈ ಸುಪ್ತಪ್ರಜ್ಞೆಯ ಪದರಗಳಲ್ಲೇ ಹುದುಗಿರುತ್ತವೆ. ಇದರ ಆಳದ ಪದರಗಳನ್ನೇ ಅತೀಂದ್ರಿಯ ಪ್ರಜ್ಞೆ (ಸೂಪರ್ ಕಾನ್ಷಿಯಸ್) ಅನ್ನಬಹುದು. ಅತ್ಯಂತ ಹಿಂದಿನ ನೆನಪುಗಳು, ಪೂರ್ವಜನ್ಮದವೂ ಸಹ, ಇಲ್ಲೇ ಹುದುಗಿರುತ್ತವೆ ಅನ್ನುತ್ತಾರೆ ಡಾ. ವೈಸ್, ಡಾ. ನ್ಯೂಟನ್, ಓರ್ಮಂಡ್, ಗಿಲ್ ಬೋಯ್ನ್, ಮತ್ತಿತರರು. ಈ ತರ್ಕಗಳೇ, ಸುನಾಥ ಕಾಕಾ, ನಿಮ್ಮ ಮೊದಲ ಸಂದೇಹಕ್ಕೆ ಉತ್ತರ.
ಇನ್ನು ಎರಡನೇ ಸಂದೇಹದ ಬಗ್ಗೆ- ಖಚಿತವಾಗಿ ಯಾವುದೇ ಸಂಭವನೀಯ ಸಾಧ್ಯತೆಗಳು ನನಗೆ ಕಂಡಿಲ್ಲ. ನಾನು ಇದುವರೆಗೆ ಓದಿ ತಿಳಿದಂತೆ, ನಮ್ಮ ನಮ್ಮ ನೆನಪುಗಳು ನಮ್ಮವೇ.
ಆದರೆ.... ಒಬ್ಬ ವ್ಯಕ್ತಿ, ತನ್ನ ಪ್ರಜ್ಞಾವಲಯವನ್ನು ತುಂಬಾ ಸಶಕ್ತವಾಗಿಸಿಕೊಂಡು, ನಿರ್ಮಲವಾಗಿಸಿಕೊಂಡು, ಸಮ್ಮೋಹನ ಸ್ಥಿತಿಗೆ ಹೋದರೆ (ಋಷಿ-ಮುನಿಗಳ ಸಮಾಧಿ ಸ್ಥಿತಿ ಇದೇ), ಆಗ ಆ ವ್ಯಕ್ತಿಗೆ ವರ್ತಮಾನದೊಂದಿಗೆ ಭೂತ-ಭವಿಷ್ಯಗಳೂ ಅರಿವಿಗೆ ಬರುವ ಬಗ್ಗೆ ದಾಖಲೆಗಳಿವೆ. ನಮ್ಮ ವೇದಗಳು ಅಂಥ ಮಹಾತ್ಮರ ಕೊಡುಗೆ. ಪುರಾಣಗಳ ತುಂಬಾ ಅಂಥವರೇ ಇದ್ದಾರೆ. ಅಂದರೆ, ಸಮ್ಮೋಹಿತ ಸ್ಥಿತಿಯಲ್ಲಿ ಎಲ್ಲ ಭೌತಿಕ ನೆಲೆಗಳನ್ನೂ ಮೀರಿ, ಅಭೌತಿಕ ಮಟ್ಟದಲ್ಲಿ, "ಜಾಗತಿಕ ಪ್ರಜ್ಞಾವಲಯದಲ್ಲಿ" ಸಂಚರಿಸುವ ಆಂತರಿಕ ಶಕ್ತಿ ಪ್ರತಿಯೊಬ್ಬರಿಗೂ ಇದೆ. ಆಗ ಅವರು ಅಂಥ "ಕಾಣ್ಕೆ"ಗಳನ್ನು ತನ್ನ ಅನುಭವ ಅಂದುಕೊಳ್ಳಲಾರರು, ಅದು ನಿಜವಾಗಿಯೂ ಏನು ಅನ್ನುವ "ಅರಿವು" ಅವರಿಗಿರುತ್ತದೆ. ಅಂಥ ಶಕ್ತಿಯನ್ನು ಸ್ವಪ್ರಯತ್ನದಿಂದ, ಗುರು-ನಿರ್ದೇಶನದಿಂದ, ಅಧ್ಯಯನದಿಂದ, ಅರಿವಿನಿಂದ ಜಾಗೃತಗೊಳಿಸಿಕೊಳ್ಳಬಹುದು.
12 comments:
ಜ್ಯೋತಿ,
Regression ಬಗೆಗೆ ನನಗೊಂದು ಮೂಲಭೂತ ಸಂದೇಹವಿದೆ. Regression ಆದಾಗ ಎರಡು ಸಾಧ್ಯತೆಗಳು ನನಗೆ ಕಾಣುತ್ತವೆ:
೧ನೆಯ ಸಾಧ್ಯತೆ: Regressionಗೆ ಒಳಗಾದ ವ್ಯಕ್ತಿ ತನ್ನ ಪೂರ್ವಜನ್ಮದ ಘಟನೆಗಳನ್ನು ನೆನಪಿಸಿಕೊಳ್ಳುವನು.
೨ನೆಯ ಸಾಧ್ಯತೆ: ಗತಕಾಲದ ಎಲ್ಲ ಘಟನೆಗಳು ಅಭೌತಿಕ spaceನಲ್ಲಿ ತೇಲುತ್ತಿದ್ದು, regression ಆದ ವ್ಯಕ್ತಿ,
ಈ ಘಟನೆಗಳಿಗೆ tune ಆದರೆ, ಅವು ತನ್ನವೇ ಅನುಭವ ಎಂದು ಭಾವಿಸಬಹುದು.
ಆದುದರಿಂದ, ಯಾವುದು ನಿಜವಿರಬಹುದೆನ್ನುವದರ ಬಗೆಗೆ verification ಅಥವಾ validation ಮಾಡಲು ಸಾಧ್ಯವೆ? ಆ ತರಹ ಮಾಡಲಾಗಿದೆಯೆ?
ಅಕ್ಕ, ತುಂಬ ಸಂತೋಷ. ನನಗೆ ಅರ್ಥವಾಗದೆ ಇರೋದನ್ನೆಲ್ಲ ನಿಮ್ಮತ್ರ ಕೇಳಿ ತಲೆ ತಿಂತೀನಿ :-)
ಸುನಾಥ ಕಾಕಾ, ನಿಮ್ಮ ಸಂದೇಹಗಳಿಗೆ ನನಗೆ ತಿಳಿದಂತೆ ಪ್ರತಿಕ್ರಿಯಿಸಿದ್ದೇನೆ, ಮುಖ್ಯ ಲೇಖದೊಂದಿಗೇ ಇದೆ.
ಇವು ನನಗೀಗ, ಈ ಮಟ್ಟದಲ್ಲಿರುವ ತಿಳುವಳಿಕೆ, ಅಷ್ಟೇ. ಪೂರ್ಣ ಸತ್ಯ ಇದಕ್ಕೂ ಮೇಲ್ಮಟ್ಟದಲ್ಲಿ "ಅಲ್ಲೆಲ್ಲೋ" ಇದೆ. ಸಾಧನೆಯಿಂದ ಅದನ್ನೂ ಚೂರು-ಚೂರೇ ಹಿಡಿದು, ತಿಳಿದು, ಅರಗಿಸಿಕೊಳ್ಳಬೇಕಾಗಿದೆ. ಆಶೀರ್ವದಿಸಿ.
ಶುಭದಾ, ಇದ್ರಲ್ಲಿ ತಲೆ ತಿನ್ನುವ ಪ್ರಶ್ನೆ ಇಲ್ಲ. ನನಗೆ ತಿಳಿದಿರುವುದನ್ನು ಬರೆಯುತ್ತೇನೆ, ಗೊತ್ತಿಲ್ಲದಿದ್ದರೆ 'ಗೊತ್ತಿಲ್ಲ ' ಅಂತೇನೆ, ಅಷ್ಟೇ.
ಜ್ಯೋತಿ,
ನೀನು ನೀಡಿದ ವಿವರಣೆಯಿಂದ ಸಮಾಧಾನವಾಯಿತು. ಧನ್ಯವಾದಗಳು.
-ಕಾಕಾ
Jyothi,
This indeed a very good thing.
Many a times I notice that few incidents when take place, I somehow get a feeling that somewhere this happened sometime back, may be I dreamt about it. But I fail to recall it where and when.. Whats this called? :-) Does this happen to me alone?
I can't type so fast in kannada, adakke english. pls adjust maadkoLLi.
ಜ್ಯೋತಿಯವರೇ,
ಒಳ್ಳೆ ಪ್ರಯತ್ನ. ಇದು ನನಗೊಂದು ಸ್ಪೂರ್ತಿ ನೀಡಿತು.ನಾನೂ ಇಂಥದೊಂದು ಪ್ರಶ್ನೆ-ಉತ್ತರ ಆರಂಭಿಸಬಹುದೇ ಎಂದು ಯೋಚಿಸುತ್ತಿದ್ದೇನೆ. ನನ್ನ ಕ್ಷೇತ್ರದ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಬಹುದೆಂದು ಅಂದುಕೊಂಡಿದ್ದೇನೆ. ನಿಮ್ಮ ಹೊಸ ಪ್ರಯತ್ನಕ್ಕೆ ಶುಭ ಹಾರೈಸುತ್ತೇನೆ.
ಅಂದ ಹಾಗೆ ಡಿಪ್ರೆಶನ್ ಅನ್ನೋದು ಮನಸ್ಸಿನ ಯಾವ ಸ್ಥಿತಿ ? ಇದು ನನ್ನ ಸಂದೇಹ.
ನಾವಡ
ಕಾಕಾ, ನಿಮಗೆ ಸಮಾಧಾನವಾಗಿದ್ದು ನನಗೂ ಸಂತೋಷ. ನನ್ನ ಪ್ರಯತ್ನಕ್ಕೆ ಹೊಸ ಬಲ ಬಂದಿದೆ.
ವೀಣಾ ಮತ್ತು ನಾವಡರೇ, ನಿಮ್ಮ ಸಂದೇಹಗಳಿಗೆ ಉತ್ತರ ಮುಖಪುಟದಲ್ಲಿ ಕೊಡುತ್ತೇನೆ. ನನ್ನ ಹೊಸ ಪ್ರಯೋಗಕ್ಕೆ ಹುರುಪು ತುಂಬಿದ್ದಕ್ಕೆ ಧನ್ಯವಾದಗಳು.
akka ee vishaya nimmadalla anta gottu. nannadu daampatya badukige sambhandhisida ondu khaasagi prashne. mujugaravaagadiddare maatra keluttene
ಯಾರಪ್ಪಾ ಈ ಅನಾಮಿಕ?
ಪರವಾಗಿಲ್ಲ, ನಿಮ್ಮ ಪ್ರಶ್ನೆ ಕೇಳಿ. ಉತ್ತರ/ಸಲಹೆ/ಸೂಚನೆ ತಿಳಿದಿದ್ದರೆ ಖಂಡಿತಾ ಸಂಕೋಚವಿಲ್ಲದೆ ಹೇಳುತ್ತೇನೆ.
ವಾವ್! ಒಳ್ಳೇ ಪ್ರಯತ್ನ. " ದೇಜಾವೂ" ಅನ್ನುತ್ತಾರಲ್ಲ...ಅದು ಬಹಳ ಸಲ ನನ್ನ ಅನುಭವಕ್ಕೆ ಬಂದಿದೆ. ಎಲ್ಲರಿಗೂ ಹೀಗಾಗುತ್ತಾ?
ಓಹ್! ನನ್ನ ಪ್ರಶ್ನೆ ಮೊದಲೇ ಯಾರೋ ಕೇಳಿಬಿಟ್ಟಿದ್ದಾರೆ! ಉತ್ತರ ಅಲ್ಲೇ ಸಿಕ್ಕಿತು :D.
Post a Comment