tag:blogger.com,1999:blog-6345737459265622584.post6532752284121420751..comments2023-07-13T13:36:52.072+05:30Comments on ಸುಪ್ತದೀಪ್ತಿ
Inner Light: ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೭ಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger4125tag:blogger.com,1999:blog-6345737459265622584.post-27966175391186303332009-10-29T01:10:52.515+05:302009-10-29T01:10:52.515+05:30ವಂದನೆಗಳು createam.
ಜ್ಹಯಾನ್ ಕಣಿವೆಯನ್ನು ಚಳಿಗಾಲದಲ್ಲಿ...ವಂದನೆಗಳು createam.

ಜ್ಹಯಾನ್ ಕಣಿವೆಯನ್ನು ಚಳಿಗಾಲದಲ್ಲಿ ಹೊಕ್ಕಾಗ ನನಗದೇ ಅನುಭವವಾಗಿತ್ತು. ಅಲ್ಲಿನ ಪ್ರಶಾಂತ ವಾತಾವರಣ, ಬಿಳಿ-ಕೆಂಪು-ಬೂದು-ಕಪ್ಪುಗಳ ಹಿನ್ನೆಲೆಯಾಗಿ ಶುಭ್ರ ನೀಲಿ ಗಗನ... ಟೆಂಪಲ್ ಆಫ಼್ ಸಿನೆವಾವದ ಹೆಸರು ಅನ್ವರ್ಥಕ ಎನಿಸಿತ್ತು. ಕೆಲವೇ ಕೆಲವು ಜನರಿದ್ದರೂ ಎಲ್ಲರೂ ಸರಿಸುಮಾರು ಮೌನವಾಗಿಯೇ ಇದ್ದರು (ನಮ್ಮ ನಂತರ ಬಂದ ಒಂದು ದೊಡ್ಡ ದೇಸೀ ಗುಂಪು ಹಿಮದಾಟ ಶುರುಮಾಡಿ ಶಾಂತಿ ಕಲಕಿದ್ದರು, ಅದು ಬೇರೆ ವಿಷಯ). ಆ ಅನುಭೂತಿ ಈ ಸಲ, ಬೇಸಗೆಯಲ್ಲಿ ಸಿಗಲಿಲ್ಲ. ವರ್ಜಿನ್ ನದಿಯ ಕಲರವವೂ ಕೇಳದಷ್ಟು ಜನರ ಕಲರವ.

ಏಂಜೆಲ್ಸ್ ಲ್ಯಾಂಡಿಂಗ್ ಹೈಕ್- ನಾವು ಕೆಳಗಿಂದಲೇ ನೀವು ಹೇಳಿದ ಕಾಲುಹಾದಿಯಲ್ಲಿ ಜನರು ನಡೆಯುವುದನ್ನು ನೋಡಿ ಅಚ್ಚರಿಪಟ್ಟು ಬಾಯಿ ಮುಚ್ಚಿ ನೆಲದಲ್ಲೇ ಗಟ್ಟಿಯಾಗಿ ನಿಂತುಬಿಟ್ಟೆವು; ಸಮಯವೂ ಇರಲಿಲ್ಲವೆನ್ನಿ!

ಜ್ಹಯಾನ್ ನ್ಯಾರೋಸ್ ಹೆಸರು ತಿಳಿದಿರಲಿಲ್ಲ, ತಿಳಿಸಿದ್ದಕ್ಕೆ ಧನ್ಯವಾದಗಳು. ಎಲ್ಲ ವಿವರಗಳನ್ನು ಓದಿಕೊಂಡು ಟ್ರೈಲಿನಲ್ಲಿ ಹೋಗುವಷ್ಟು ಸಮಯ ನಮಗಿರಲಿಲ್ಲ. ಹಾಗಾಗಿ, ಸುಮ್ಮನೇ ಪ್ರಮುಖವಾದದ್ದು ಮತ್ತು ಸುಲಭವಾದದ್ದನ್ನು ಮಾತ್ರ ನೋಡಿದೆವು. ಫ಼್ಲ್ಯಾಶ್ ಫ಼್ಲಡ್ ವಾರ್ನಿಂಗ್ ಇರುತ್ತದೇನೋ ನಿಜ, ಆದ್ರೆ ರೇಂಜರ್ ಜೊತೆ ಚರ್ಚಿಸಿಯೇ ನ್ಯಾರೋಸ್ ಒಳಗೆ ಇಳಿಯುವಷ್ಟು ವ್ಯವಧಾನ ಇಲ್ಲದವರೇ ಹೆಚ್ಚು!

ಬ್ರೈಸ್ ಕೂಡಾ ಇನ್ನೊಂದು ಸುಂದರ ತಾಣ. ಅದರ ಬಗ್ಗೆ ಮುಂದಿನ ಕಂತುಗಳಲ್ಲಿ ಬರೆಯುತ್ತೇನೆ.

ಯೆಲ್ಲೋಸ್ಟೋನ್ ಮತ್ತು ಗ್ರ್ಯಾಂಡ್ ಕ್ಯಾನಿಯನ್ ಹೆಸರುವಾಸಿ, ನಿಜ. ಅವುಗಳ ಜೊತೆಗೆ- ಬ್ಲ್ಯಾಕ್ ಮೌಂಟೇನ್, ರಾಕ್ಕೀಸ್, ಗ್ರ್ಯಾಂಡ್ ಟೀಟಾನ್, ಪೈಕ್ಸ್ ಪೀಕ್, ಯೋಸೆಮಿಟಿ, ಕಿಂಗ್ಸ್ ಕ್ಯಾನಿಯನ್, ಕ್ಯಾನಿಯನ್ ಕಂಟ್ರಿ, ಆರ್ಚಸ್, ಜೋಷುವಾ ನ್ಯಾ.ಪಾರ್ಕ್, ಕ್ರೇಟರ್ ಲೇಕ್, ಲಾಸೆನ್ ವೊಲ್ಕಾನಿಕ್ ಪಾರ್ಕ್, ಮೌಂಟ್ ಮತ್ತು ಲೇಕ್ ಶಾಸ್ತ, ಕೊಲಂಬಿಯಾ ರಿವರ್ ಗಾರ್ಜ್, ಮೌಂಟ್ ರೈನೀರ್... ಎಲ್ಲವೂ ಅವುಗಳದ್ದೇ ಆದ ಛಾಪು ಹೊಂದಿವೆ. "ಎಲ್ಲೆಲ್ಲೂ ಸೌಂದರ್ಯವೇ..." ಅಲ್ಲವೆ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-70668433617661598702009-10-28T23:43:26.458+05:302009-10-28T23:43:26.458+05:30ಜ್ಹಯಾನ್ (zion, z ಶಬ್ದ) ನನ್ನ ಮೆಚ್ಚಿನ ತಾಣ. ಇದರ ಸೊಬಗು...ಜ್ಹಯಾನ್ (zion, z ಶಬ್ದ) ನನ್ನ ಮೆಚ್ಚಿನ ತಾಣ. ಇದರ ಸೊಬಗು ಯಾವ ಫೋಟೋದಲ್ಲೂ ಕಾಣೋದಿಲ್ಲ ಅಲ್ಲವಾ? ನಾನು ಅಮೆರಿಕದಲ್ಲಿ ಹೋದ ನ್ಯಾಷನಲ್ ಪಾರ್ಕುಗಳಲ್ಲಿ zionಗೆ ಮೊದಲ ಸ್ಥಾನ (ಗ್ರಾಂಡ್ ಕ್ಯಾನ್ಯನ್ ಮತ್ತು ಯಲ್ಲೋಸ್ಟೋನನ್ನು ಮೀರಿ). ಯಾಕೆ ಅಂತ ಗೊತ್ತಿಲ್ಲ, zionನಲ್ಲಿ ನೆಮ್ಮದಿಯ ಪರಾಕಾಷ್ಠೆ ಸಿಗುತ್ತದೆ. ಇದಕ್ಕಿಂತ ಅದ್ಭುತ ಅನ್ನಬಹುದಾದ ಜಾಗಗಳು ಇರಬಹುದು, ಆದರೆ zionನಲ್ಲಿದಾಗ ಜೀವನದ ಬಗ್ಗೆ ಆಸಕ್ತಿಕರವಾದ ಪ್ರಶ್ನೆಗಳು ಮೂಡುತ್ತವೆ. ಯಾವುದೋ ವಿಶಿಷ್ಟ ಶಕ್ತಿ ಇರುವ ಜಾಗದ ಮದ್ಯೆ ನಿಂತಂತೆ ಭಾಸವಾಗುತ್ತದೆ. ಅದಕ್ಕೆ zion ಎಂಬ ಹೆಸರಿಟ್ಟವನಿಗು ಇದೆ ಅನುಭವವಾಗಿರಬಹುದು, zion, ಎಂತಾ ಸೂಕ್ತ ಹೆಸರು.
ಇಲ್ಲಿ ನಾನು Angel's Landing ಟ್ರೇಲ್ಗೆ ಹೋಗಿದ್ದೆ. ಕೊನೆಯ ಅರ್ಧ ಮೈಲಿ ಆಗಲಿಲ್ಲ. ಅಲ್ಲಿ ಒಂದು ಕಡೆ ೯೦೦ ಅಡಿ, ಇನ್ನೊದು ಕಡೆ ೧೨೦೦ ಅಡಿಯ ಕಂದಕ, ಮಧ್ಯ ಬರೆ ೩-೪ ಅಡಿಯಲ್ಲಿ ನಡಿಗೆ, ನನಗೆ ಅತಿ ಎನಸಿತು. ಆದರು ಅಲ್ಲಿಂದ ಹಿಂತಿರುಗುವ ಮುನ್ನ ಹೇಳಿದೆ, ಇನ್ನು ಜೀವನದಲ್ಲಿ ನೋಡಲು ತುಂಬಾ ಜಾಗಗಳಿವೆ, ಎಲ್ಲ ಮುಗಿದಾಗ I'll be back, ಆ ಕೊನೆಯ ಅರ್ಧ ಮೈಲಿ ಮುಗಿಸಲು.
ನೀವು ಹೇಳಿದ ನದಿಯಲ್ಲಿ ನಡೆಯುವುದನ್ನು (ಟೆಂಪಲ್ ಆಫ್ ಸಿನವಾವದಿಂದ) ನ್ಯಾರೋಸ್ (zion narrows) ಅಂತ ಕರೆಯುತ್ತಾರೆ (ನಿಮಗೆ ಗೊತ್ತಿರಬಹುದು, ಕಾಮೆಂಟ್ ಓದುವವರಿಗೆ ತಿಳಿದಿರಲಿ ಅಂತ ಹೇಳುತ್ತಿದ್ದೇನೆ). ನೀವು ಹೇಳಿದಂತೆ ನ್ಯಾರೋಸ್ನಲ್ಲಿ ನಡಿಗೆ ಪೂರ್ವ ಸಿದ್ಧತೆ ಇರದಿದ್ದರೆ ಅಪಾಯಕಾರಿ. ಆದರೆ ಫ್ಲಾಶ್ ಫ್ಲಡ್ಗೆ ಮುನ್ನೆಚ್ಚರಿಕೆ (flash flood warning) ಇರುತ್ತದೆ. ಹಾಗೆ ರೇಂಜರ್ಗಳಲ್ಲಿ ವಿಚಾರಿಸಿ ಅಲ್ಲಿಗೆ ಹೋದರೆ ಯಾವುದೇ ತೊಂದರೆಯಿಲ್ಲ. ನಾನು ಸುಮಾರು ೩ ಮೈಲಿ ಒಳಗೆ ಹೋಗಿದ್ದೆ, ಸಮಯದ ಅಭಾವ ಇದ್ದದ್ದರಿಂದ ಹಿಂದೆ ಬರಬೇಕಾಯಿತು.
ಜನ ವೇಗಾಸ್ಗೆ ಹೋಗಿ ಮಜಾ ಮಾಡಿ, ಅಲ್ಲಿಂದ ಗ್ರಾಂಡ್ ಕ್ಯಾನ್ಯನ್ಗೆ ಹೋಗಿ ವಾಪಾಸ್ ಆಗ್ತಾರೆ. ಆದರೆ ವೆಗಾಸ್ನಿಂದ ಕೇವಲ ೨.೫ - ೩ ಘಂಟೆ ದೂರದಲ್ಲಿ ಇರುವ zion ಎಂತಾ ಸುಂದರ ಜಾಗ ಅಂತ ಹಲವರಿಗೆ ಗೊತ್ತಿಲ್ಲ.Anonymousnoreply@blogger.comtag:blogger.com,1999:blog-6345737459265622584.post-30268322817031726042009-10-26T22:47:57.541+05:302009-10-26T22:47:57.541+05:30ಶಿವು, ಇದನ್ನು ವೇಗವೆನ್ನುತ್ತೀರ? ವಾರಕ್ಕೊಂದು ಸ್ಥಳದ ಬಗ್ಗ...ಶಿವು, ಇದನ್ನು ವೇಗವೆನ್ನುತ್ತೀರ? ವಾರಕ್ಕೊಂದು ಸ್ಥಳದ ಬಗ್ಗೆ ಬರೀತಿದ್ದೇನೆ, ಅಷ್ಟೇ. ಇರಲಿ, ನೀವು ರಿಲ್ಯಾಕ್ಸ್ ಆಗಿ ತಿರುಗಾಡಿಕೊಂಡು ಬನ್ನಿ. ಮತ್ತೆ ಸಿಗೋಣ. ವಂದನೆಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-81098214102708954652009-10-26T14:33:37.782+05:302009-10-26T14:33:37.782+05:30ಮೇಡಮ್,
ಮೊದಲ ಐದು ದಿನದ ಪ್ರವಾಸ ಮುಗಿದಿದ್ದು ಗೊತ್ತಾಗಲಿಲ...ಮೇಡಮ್,

ಮೊದಲ ಐದು ದಿನದ ಪ್ರವಾಸ ಮುಗಿದಿದ್ದು ಗೊತ್ತಾಗಲಿಲ್ಲ ಹಾಗೆ ವೇಗವಾಗಿ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದೀರಿ. ನೀವು ಸ್ವಲ್ಪ ರಿಲ್ಯಾಕ್ಸ್ ಆಗಿ ನಾನು ಸ್ವಲ್ಪ ರಿಲ್ಯಾಕ್ಸ್ಗಾಗಿ ನಮ್ಮ ಭಾರತಕ್ಕೆ ಹೋಗಿ ಬೇಗ ಬಂದುಬಿಡುತ್ತೇನೆ. ಮುಂದಿನ ಪ್ರವಾಸದ ಬ್ಲಾಗಿನಲ್ಲಿ ಜೊತೆ ಸೇರಿಕೊಂಡುಬಿಡುತ್ತೇನೆ...ಆಯ್ತಾ...ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.com