ಅಟ್ಟ ಸುತ್ತುವ ಬೆಕ್ಕು ಅಟ್ಟುಂಬುದುಂಟೇನು
ಕಟ್ಟಿಗೆಯ ಕುದುರೆಯದು ಬೆಟ್ಟವೇರುವುದೇ
ತೊಟ್ಟ ಹಾವಿಗೆ ಹರಿಯೆ ನೆಟ್ಟನಡೆ ಬಹುದೇನು
ಸಿಟ್ಟುಗೊಂಡರೆ ಕಡಲು ಮೆಟ್ಟಿ ನಿಲುವೆಯ ಮನುಜ!
ಬದುಕು ಬವಣೆಗಳಲ್ಲಿ ಎದಕು ಸರಿಬೆಸವಿಲ್ಲ
ಬೆದಕುವವರೆದೆಯೊಳಗೆ ಮೆದುತನವದಿಲ್ಲ
ತದುಕಿದರೆ ಭವವೆಂಬ ನದಿಯೊಳಗೆ ಹದವಿಲ್ಲ
ಅದರಂತರಾರ್ಥದಲಿ ಬದುಕಿರಲಿ ಮನುಜ!