"ನನ್ನ ಇತ್ತೀಚಿನ ಓದಿನ ಪ್ರಕಾರ..." ಎಂದಿದ್ದೆ.
ಕಳೆದೊಂದು ವರ್ಷದಿಂದ `ಆತ್ಮ'ದ ಬಗ್ಗೆ ಓದುತ್ತಿದ್ದೇನೆ.
ಮೊದಲಾಗಿ ಓದಿದ್ದು (ಗೆಳೆಯರೊಬ್ಬರು ತಂದುಕೊಟ್ಟದ್ದು): ಮೈಕೆಲ್ ನ್ಯೂಟನ್ರ "ಜರ್ನಿ ಆಫ್ ಸೋಲ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೧೯೯೪). ತದನಂತರ ಸಾಲಾಗಿ ಓದಿದ್ದು: ಬ್ರಯಾನ್ ವೈಸ್ರ "ಮೆನಿ ಲೈವ್ಸ್, ಮೆನಿ ಮಾಸ್ಟರ್ಸ್" (ಫಯರ್ ಸೈಡ್, ೧೯೮೮), "ತ್ರೂ ಟೈಮ್ ಇನ್ಟು ಹೀಲಿಂಗ್" (ಫಯರ್ ಸೈಡ್, ೧೯೯೨), "ಮೆಸೇಜಸ್ ಫ್ರಮ್ ದ ಮಾಸ್ಟರ್ಸ್" (ವಾರ್ನರ್ ಬುಕ್ಸ್, ೨೦೦೦). ಈಗ ಓದುತ್ತಿರುವುದು: ಮೈಕೆಲ್ ನ್ಯೂಟನ್ರ "ಡೆಸ್ಟಿನಿ ಆಫ್ ಸೋಲ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೨೦೦೬).
ಡಾ.ನ್ಯೂಟನ್ (ಕ್ಯಾಲಿಫೋರ್ನಿಯಾ) ಮತ್ತು ಡಾ.ವೈಸ್ (ಫ್ಲೋರಿಡಾ)- ಅಮೆರಿಕದ ಎರಡು ತೀರಗಳಲ್ಲಿ ಮನೋವೈದ್ಯರಾಗಿ ತಮ್ಮ ಕಾರ್ಯಕ್ಷೇತ್ರ ಆರಿಸಿಕೊಂಡವರು. ತಮ್ಮ ಗ್ರಾಹಕರನ್ನು ಸಮ್ಮೋಹನ ಚಿಕಿತ್ಸೆಗೆ ಒಳಪಡಿಸುತ್ತಿದ್ದವರು. ಇಬ್ಬರೂ ಆಕಸ್ಮಿಕವಾಗಿ ತಮ್ಮ ವೃತ್ತಿಯಲ್ಲಿ ಆತ್ಮದ ತಿಳುವಳಿಕೆ ಪಡೆದವರು. ಗ್ರಾಹಕರು ಇದ್ದಕ್ಕಿದ್ದಂತೆ ಈ ಜನ್ಮದ ಹೊರತಾಗಿ ಪೂರ್ವಜನ್ಮದ ಬಗ್ಗೆ ಮಾತನಾಡತೊಡಗಿದಾಗ ಒಮ್ಮೆಗೆ ಗಾಬರಿಯಾದರೂ ಸುಧಾರಿಸಿಕೊಂಡು ಅದನ್ನು ವಿಶ್ಲೇಷಿಸಿದವರು. ಅದರಲ್ಲಿ ಮತ್ತಷ್ಟು ಆಸಕ್ತಿ ತಾಳಿ, ಆ ಹಾದಿಯಲ್ಲೇ ಕ್ರಮಿಸಿ (ಶ್ರಮಿಸಿ), ವೈಜ್ಞಾನಿಕವಾಗಿ ಆತ್ಮದ ಬಗ್ಗೆ ಒಂದಿಷ್ಟು ವಿವರ ಕಲೆಹಾಕಿ ಪುಸ್ತಕ ರೂಪಕ್ಕಿಳಿಸಿದವರು. ಇಬ್ಬರ ಅಭಿಪ್ರಾಯದಲ್ಲೂ ನಮ್ಮ ಆತ್ಮದಲ್ಲಿ ಪೂರ್ವಜನ್ಮದ ನೆನಪುಗಳು ಹುದುಗಿರುತ್ತವೆ.
ಪ್ರಜ್ಞೆ- ಸುಪ್ತಪ್ರಜ್ಞೆ- ಉಪಪ್ರಜ್ಞೆ- ಅತೀಂದ್ರಿಯ ಪ್ರಜ್ಞೆ (ಆಳವಾದ ಸಮ್ಮೋಹಿತ ಸ್ಥಿತಿ) [conscious- unconscious- subconscious- superconscious (of deep hypnotic stage)]-- ಮಾನವ ಪ್ರಜ್ಞೆಯ ವಿವಿಧ ನೆಲೆಗಳು. ಇವುಗಳಲ್ಲಿ ಪ್ರಜ್ಞೆ, ಸುಪ್ತಪ್ರಜ್ಞೆ, ಮತ್ತು ಉಪಪ್ರಜ್ಞೆಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದವುಗಳೇ. ಇನ್ನುಳಿದ `ಅತೀಂದ್ರಿಯ ಪ್ರಜ್ಞೆ' ನಮ್ಮ ಆತ್ಮದ ನೆಲೆ. ವ್ಯಕ್ತಿ ಸಮ್ಮೋಹಿತನಾದಾಗ ಸಾಮಾನ್ಯವಾಗಿ ಇಷ್ಟು ಆಳವಾದ ಪ್ರಜ್ಞಾನೆಲೆಗೆ ಇಳಿಯುವುದಿಲ್ಲ. ಬಹುತೇಕ ಸಮ್ಮೋಹನ ಚಿಕಿತ್ಸೆಯಲ್ಲಿ ಇದೇ ಜೀವನದ ವಿವಿಧ ಸ್ತರಗಳ ಬೇನೆ-ಬೇಸರಗಳ ನೆಲೆಗಳನ್ನು ಅಗೆದು ತೆಗೆದು, ವಿವರವಾಗಿ ವಿಶ್ಲೇಷಿಸಿ ಅದನ್ನು ನೋವಿನ ನೆಲೆಯಿಂದ ಹೊರತುಗೊಳಿಸಿ, ಆಳವಾದ ಪ್ರಜ್ಞಾಸ್ತರದ ಘಾಸಿಗಳನ್ನು ವಾಸಿಮಾಡುವ ಪ್ರಯತ್ನ ನಡೆಯುತ್ತದೆ. ಆದರೆ, ಡಾ.ನ್ಯೂಟನ್ ಮತ್ತು ಡಾ.ವೈಸ್ ಹೇಳುವಂತೆ "ರೆಗ್ರೆಷನ್ ಥೆರಪಿ"ಯಲ್ಲಿ ವ್ಯಕ್ತಿ ತನ್ನ ಬೇನೆ-ಬೇಸರಗಳಿಗೆ ಪೂರ್ವಜನ್ಮದ ಕಾರಣಗಳಿದ್ದರೂ ಅದನ್ನೂ ಕಂಡುಕೊಂಡು ವಾಸಿ ಮಾಡಿಕೊಳ್ಳಬಹುದು. ಮುಂದೆ ಶಾಂತ ಜೀವನ ನಡೆಸಬಹುದು.
ಮೊದಲ ಕಂತಿಗೆ ಇದಿಷ್ಟು ಸಾಕು. ಮುಂದಿನ ಕಂತಿನಲ್ಲಿ ಮುಂದುವರಿಯೋಣ....
ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪು....ಮರು ಜನ್ಮದಲ್ಲಿಯೂ ನೆನಪಿರುತ್ತದೆ ಅಂತ ಆಯ್ತು!
ReplyDeleteI am waiting for your next edition .. !
ReplyDelete@ಅನಿಕೇತನ: ಖಂಡಿತಾ ಬರೆಯುತ್ತೇನೆ. ಭೇಟಿಯಿತ್ತಿದ್ದಕ್ಕೆ ಸ್ವಾಗತ.
ReplyDelete@ಶ್ರೀತ್ರಿ: "...ಪ್ರೇಮ ಜಲದ ಕಂಪು...." ಮಾತ್ರವಲ್ಲ ಎಲ್ಲ ಭಾವಗಳ ನೋವುಗಳ ನೆನಪುಗಳೂ ಇರುತ್ತವೆ. ಬೇಕೇ ಬೇಕಾದಾಗ ಆ ನೆನಪುಗಳು "ದೇ-ಜ-ವೂ" ರೂಪದಲ್ಲಾಗಲೀ, ವಿಸ್ಮಯಕಾರಿ ನೆನಪಿನಂತಾಗಲೀ, ಕನಸಿನಂತಾಗಲೀ ಮರುಕಳಿಸಿ ವಾಸ್ತವ ಪ್ರಜ್ಞೆಯ ಸ್ತರಕ್ಕೆ ಎದ್ದು ಬರುತ್ತವೆ.
ಸುಪ್ತದೀಪ್ತಿಯವರೇ,
ReplyDeleteಬೇನೆ ಬೇಸರಗಳಿಗೆ ಪೂರ್ವಜನ್ಮದ ಕಾರಣಗಳೇ?
ಅದು ಹೇಗೆ? ಅದನ್ನು ವಾಸಿಪಡಿಸುವದರೆಂದರೆ ಹೇಗೆ?
ಅಂದ ಹಾಗೆ ಸಾಧ್ಯವಾದರೆ 'ದೇ-ಜ-ವೂ' ಬಗ್ಗೆ ಒಂದು ಎಪಿಸೋಡ್ ಬರೆಯಿರಿ..ಕೆಲವೊಮ್ಮೆ ತುಂಬಾ ಕಾಡಿಸುತ್ತೆ ಈ ದೇ-ಜ-ವೂ
very insightful.
ReplyDeletekaLeda janmavannu upoyogisi besaragaLLaNNu nivaarisuvudu, ondhu oohisalaaradanthaha vishaya(nanna yochane).
inondhu maatu, yellaru poorvajanma inthadarannu nambalaararu. namma nithya jeevanadalli, saamanyavaagi, 'super-conscious' bittu mikkidellavannu anubhavisirutteve... of course, naavu yella ghaTanegallanu parisheelisuvudaake sadhyavilla...alve?
@ಶಿವ್, ಎಲ್ಲ ಬೇನೆ-ಬೇಸರಗಳಿಗೆ ಅಲ್ಲ. ಕೆಲವೊಂದು ನೋವುಗಳು, ಖಾಯಿಲೆಗಳು, ವೈದ್ಯಕೀಯವಾಗಿ ವಿವರಿಸಲಾಗದ ವಿಶೇಷ ಪರಿಸ್ಥಿತಿಗಳನ್ನು 'ರೆಗ್ರೆಷನ್ ಥೆರಪಿ' ವಿಧಾನದಲ್ಲಿ ಗುಣಪಡಿಸಬಹುದು.
ReplyDelete'ದೇ-ಜ'ವೂ' ಬಗ್ಗೆ ನನಗೂ ಆಸಕ್ತಿಯಿದೆ, ಆದರೆ ವಿವರವಾಗಿ ಗೊತ್ತಿಲ್ಲ. ಅದರ ಬಗ್ಗೆ ತಿಳಿದಷ್ಟನ್ನು ಬರೆಯಬಲ್ಲೆ.
@ಮೌನ, ನಿಜ, ಎಲ್ಲರೂ ಆತ್ಮದ ಬಗ್ಗೆ, ಪೂರ್ವ/ಪುನರ್-ಜನ್ಮಗಳ ಬಗ್ಗೆ ನಂಬಲಾರರು. ನಾನೂ ನಂಬಿರಲಿಲ್ಲ. 'ಪಲಾಯನವಾದ' ಎಂದು ವಾದ ಮಾಡುತ್ತಿದ್ದೆ, ಈ ಪುಸ್ತಕಗಳನ್ನು ಓದುವವರೆಗೆ. ಈಗ, ಮನೋವೈಜ್ಞಾನಿಕವಾಗಿ ಒಪ್ಪುವ ಅತೀಂದ್ರಿಯ ಪ್ರಜ್ಞೆಯೇ ಆತ್ಮಶಕ್ತಿ ಎಂದಾದಮೇಲೆ ನಂಬಿಕೆಗೂ ಮೀರಿದ ವಿಶ್ವಾಸ ಬೆಳೆದಿದೆ.
ಮೌನ, ನನ್ನ ಬ್ಲಾಗಿಗೆ ಸ್ವಾಗತ. ಮೊದಲ ಬಾರಿ ಬಂದಿದ್ದೀರಿ, ಅಲ್ಲವೇ?
ReplyDelete